ತೆಲಂಗಾಣದಲ್ಲಿ ಈ ಬಾರಿ ಅಧಿಕಾರ ಬದಲಾಗುತ್ತಾ..? ಕಾಂಗ್ರೆಸ್ -ಬಿಆರ್‌ಎಸ್‌ ನಡುವೆ ಭಾರೀ ಪೈಪೋಟಿ !

ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರನಾ..?
ಕಾಂಗ್ರೆಸ್‌ಗೆ ಸರಳ ಬಹುಮತ ಎನ್ನುತ್ತಿದೆ ಸಮೀಕ್ಷೆ
ಅಧಿಕಾರದ ಗದ್ದುಗೆ ಹಿಡಿಯುತ್ತಾ ಕಾಂಗ್ರೆಸ್‌ ಪಡೆ

First Published Dec 1, 2023, 11:41 AM IST | Last Updated Dec 1, 2023, 11:41 AM IST

ಪಂಚರಾಜ್ಯ ಫೈಟ್‌ನ ಕೊನೆ ಹಂತದ ಮತದಾನ ಮುಗಿದು  ಮತದಾನೋತ್ತರ ಸಮೀಕ್ಷೆಯೂ ಜನರ ಮುಂದೆ ಬಂದಿದೆ. ಸಮೀಕ್ಷೆಗಳು(Surveys) ಹೇಳುವಂತೆ ಎರಡು ರಾಜ್ಯಗಳಲ್ಲಿ ಬಿಜೆಪಿ(BJP), ಇನ್ನೆರಡು ರಾಜ್ಯಗಳಲ್ಲಿ ಕಾಂಗ್ರೆಸ್(Congress) ಅಧಿಕಾರಕ್ಕೆ ಬಂದ್ರೆ ಒಂದು ರಾಜ್ಯದಲ್ಲಿ ಮಾತ್ರ ಅತಂತ್ರ ಸ್ಥಿತಿ ಬಂದೊದಗಲಿದೆ ಎಂದು ಸಮೀಕ್ಷೆಗಳು(Exit Polls) ಭವಿಷ್ಯ ನುಡಿದಿವೆ. ಹಾಗಾಗಿ ಈ ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದು ಬೀಗೋದ್ಯಾರು..? ಎಂಬ ಪ್ರಶ್ನೆ ಕಾಡತೊಡಗಿದೆ. ಮತಗಟ್ಟೆ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ ಹೊರ ಬಿದ್ದಿದೆ. ಆಡಳಿತ ವಿರೋಧಿ ಅಲೆ ಭೇದಿಸ್ತಾರಾ ಸಿಎಂ ಕೆಸಿಆರ್ ಎಂಬುದನ್ನು ಕಾದು ನೋಡಬೇಕಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ - ಬಿಆರ್‌ಎಸ್‌(BRS) ನಡುವೆ ಭಾರೀ ಪೈಪೋಟಿ ಇದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ಬರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಇದನ್ನೂ ವೀಕ್ಷಿಸಿ:  ಹಾಸನದಲ್ಲಿ ಶಿಕ್ಷಕಿ ಅಪಹರಣ ಪ್ರಕರಣ ಸುಖಾಂತ್ಯ: ಬೆಳಗ್ಗೆ ಕಿಡ್ನಾಪ್, ರಾತ್ರಿ ಹೊತ್ತಿಗೆ ಆರೋಪಿಗಳು ಅಂದರ್