ತೀಸ್ರಿ ಬಾರ್‌, ಮೋದಿ ಸರ್ಕಾರ್‌; 2024ರಲ್ಲೂ ನಮೋಗೆ ಅಧಿಕಾರ ಎಂದ ಸರ್ವೇ

ಟೈಮ್ಸ್ ನೌ ಹಾಗೂ ಇಟಿಜಿ ಸರ್ವೇಯಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಬರುವುದು ಬಹುತೇಕ ಖಚಿತವಾಗಿದೆ. ಅಂದಾಜಿನ ಪ್ರಕಾರ ಬಿಜೆಪಿ 323 ಸೀಟ್‌ಗಳಲ್ಲಿ ಗೆಲುವು ದಾಖಲಿಸಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ನ.14): ಅಬ್‌ಕೀ ಬಾರ್‌ ಮೋದಿ ಸರ್ಕಾರ್‌, ದೂಸ್ರಿ ಬಾರ್‌ ಮೋದಿ ಸರ್ಕಾರ್‌ ಎಂದಿದ್ದ ಬಿಜೆಪಿ ಕಾರ್ಯಕರ್ತರು ಈಗ ತೀಸ್ರಿ ಬಾರ್‌ ಮೋದಿ ಸರ್ಕಾರ್‌ ಎನ್ನುವ ಸಮಯ. ಟೈಮ್ಸ್‌ ನೌ-ಇಟಿಜಿ ಸರ್ವೇಯಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿಯುವುದು ನಿಶ್ಚಿತ ಎನ್ನಲಾಗಿದೆ.

ಚುನಾವಣೆಯಲ್ಲಿ ಬಿಜೆಪಿ 323 ಸೀಟ್‌ಗಳಲ್ಲಿ ಗೆಲುವು ಸಾಧಿಸಲಿದ್ದರೆ, ವಿರೋಧ ಪಕ್ಷಗಳ ಮೈತ್ರಿಯಾಗಿರುವ ಇಂಡಿ ಒಕ್ಕೂಟ 163 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಅದರೊಂದಿಗೆ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅಧಿಕ ಸೀಟ್‌ಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ.

80ನೇ ವರ್ಷದಲ್ಲಿ ಬಿಲಿಯನೇರ್‌ ಪಟ್ಟಿಗೆ ಸೇರಿದ 8ಪಿಎಂ ವಿಸ್ಕಿ ಮಾಲೀಕ!

ಹಾಗೇನಾದರೂ ಇಂದೇ ಚುನಾವಣೆ ನಡೆದಲ್ಲಿ ಬಿಜೆಪಿ ಇಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ. ಅದರೊಂದಿಗೆ ಜವಹರಲಾಲ್‌ ನೆಹರು ಬಳಿಕ ಸತತ ಮೂರನೇ ಅವಧಿಗೆ ಪ್ರಧಾನಿಯಾದ ಮೊದಲ ವ್ಯಕ್ತಿ ಎನ್ನುವ ಶ್ರೇಯಕ್ಕೆ ನರೇಂದ್ರ ಮೋದಿ ಭಾಜನರಾಗುವುದು ಖಚಿತವಾಗಿದೆ.

Related Video