ದೆಹಲಿ ಮೂಲದ ರಾಡಿಕೊ ಖೈತಾನ್‌ನ ಅಧ್ಯಕ್ಷರಾದ ಲಲಿತ್ ಖೈತಾನ್ ಅವರು $ 1 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ ಹೊಸ ಬಿಲಿಯನೇರ್ ಎನಿಸಿಕೊಂಡಿದ್ದಾರೆ. 

ನವದೆಹಲಿ (ಡಿ.14): ಎಲೈಟ್‌ ಥ್ರೀ ಕಾಮಾ ಕ್ಲಬ್‌ ಎಂದೂ ಹೇಳಲಾಗುವ ಬಿಲಿಯನೇರ್‌ ಕ್ಲಬ್‌ಗೆ ಭಾರತದಿಂದ ಹೊಸಬರ ಪ್ರವೇಶವಾಗಿದೆ. ತಮ್ಮ 80ನೇ ವಯಸ್ಸಿನಲ್ಲಿ ರಾಡಿಕೋ ಖೈತಾನ್‌ ಮಾಲೀಕರಾದ ಲಲಿತ್‌ ಖೈತಾನ್‌ ಬಿಲಿಯನೇರ್‌ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಫೋರ್ಬ್ಸ್ ಮ್ಯಾಗಜೀನ್‌ ವರದಿಯ ಪ್ರಕಾರ ದೆಹಲಿ ಮೂಲದ ರಾಡಿಕೋ ಖೈತಾನ್‌ ಕ್ಲಬ್‌ನ ಅಧ್ಯಕ್ಷರಾಗಿರುವ ಲಲಿತ್‌ ಖೈತಾನ್‌, ತಮ್ಮ ಆರ್ವಜನಿಕ ವಲಯದ ಕಂಪನಿಯ ಶೇರುಗಳು ಈ ವರ್ಷ ಶೇ.50ಕ್ಕಿಂತ ಅಧಿಕ ಪ್ರಮಾಣದಲ್ಲಿ ಜಿಗಿದಿರುವ ಕಾರಣ ಈ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ಅದರೊಂದಿಗೆ ಕಂಪನಿಯಲ್ಲಿ ಇವರು ಪಾಲಿ ಶೇ. 40ರಷ್ಟಿದೆ. ಇದೆಲ್ಲವನ್ನೂ ಲೆಕ್ಕಾಚಾರ ಮಾಡಿ ಲಲಿತ್‌ ಖೈತಾನ್‌ ಅವರ ನಿವ್ವಳ ಮೌಲ್ಯ 1 ಬಿಲಿಯನ್‌ ಯುಎಸ್‌ ಡಾಲರ್‌ ದಾಟಿದೆ ಎಂದು ಅಂದಾಜಿಸಲಾಗಿದೆ. ಲಲಿತ್ ಖೈತಾನ್ ಅವರು ರಾಡಿಕೊ ಖೈತಾನ್‌ನ ಕಂಪನಿಯ ಅಧ್ಯಕ್ಷರು. ಮ್ಯಾಜಿಕ್ ಮೊಮೆಂಟ್ಸ್ ವೋಡ್ಕಾ, 8 PM ವಿಸ್ಕಿ, ಓಲ್ಡ್ ಅಡ್ಮಿರಲ್ ಬ್ರಾಂಡಿ ಮತ್ತು ರಾಂಪುರ್ ಸಿಂಗಲ್ ಮಾಲ್ಟ್‌ನಂತಹ ಆಲ್ಕೋಹಾಲ್‌ ಉತ್ಪನ್ನಗಳನ್ನು ಈ ಕಂಪನಿ ತಯಾರಿಸುತ್ತದೆ.

ರಾಡಿಕೊ ಖೈತಾನ್ ಕಂಪನಿಯನ್ನು ಮೊದಲು ರಾಂಪುರ್ ಡಿಸ್ಟಿಲರಿ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಅವರ ತಂದೆ ಜಿಎನ್ ಖೈತಾನ್ ಅವರು 1970 ರ ದಶಕದ ಆರಂಭದಲ್ಲಿ ಭಾರೀ ನಷ್ಟದಲ್ಲಿದ್ದ ಈ ಕಂಪನಿಯನ್ನು ಖರೀದಿ ಮಾಡಿದ್ದರು. 1995 ರಲ್ಲಿ ಜಿಎನ್‌ ಖೈತಾನ್ ತನ್ನ ನಾಲ್ಕು ಗಂಡು ಮಕ್ಕಳ ನಡುವೆ ಕುಟುಂಬದ ವ್ಯವಹಾರಗಳನ್ನು ಹಂಚಿದಾಗ ಲಲಿತ್‌ ಖೈತಾನ್‌ ತಮ್ಮ ತಂದೆಯಿಂದ ಡಿಸ್ಟಿಲರಿಯನ್ನು ಪಡೆದುಕೊಂಡಿದ್ದರು.

ಬಹುಶಃ ನಾನು 9ನೇ ತರಗತಿಯಲ್ಲಿದ್ದೆ ಎಂಧು ಕಾಣುತ್ತದೆ. ಅಂದೇ ನಾನು ಮುಂದೆ ಮದ್ಯದ ವಾಪಾರದಲ್ಲಿಯೇ ತೊಡಗಬೇಕು ಎಂದು ಬಯಸಿದ್ದೆ ಎಂದು 2020ರಲ್ಲಿ ಫಾರ್ಚುನ್‌ ಮ್ಯಾಗಜೀನ್‌ಗೆ ನೀಡಿದ್ದ ಸಂದರ್ಶನದಲ್ಲಿ ಲಲಿತ್‌ ಖೈತಾನ್‌ ಹೇಳಿದ್ದರು. ಅಂದು ನಮ್ಮ ಮಾರುಕಟ್ಟೆ ಮೌಲ್ಯ 5ಕೋಟಿಯಾಗಿತ್ತು. ಇದು ಇದು 5 ಸಾವಿರ ಕೋಟಿಗೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

1972 ರಲ್ಲಿ ರಾಮ್‌ಪುರ ಡಿಸ್ಟಿಲರಿ ವ್ಯವಹಾರವನ್ನು 16 ಲಕ್ಷ ರೂಪಾಯಿಗಳಿಗೆ ಜಿಎನ್‌ ಖೈತಾನ್‌ ಸ್ವಾಧೀನಪಡಿಸಿಕೊಳ್ಳುವವರೆಗೂ ಲಲಿತ್‌ ಖೈತಾನ್ ಟೀಟೋಟ್ಲರ್‌ (ಮದ್ಯ, ಸಿಗರೇಟ್‌ ಅಭ್ಯಾಸವಿಲ್ಲದ ವ್ಯಕ್ತಿ) ಆಗಿದ್ದರು. ಅವರ ತಂದೆ ಜಿಎನ್ ಖೈತಾನ್ ಅವರು ಸಾಂಪ್ರದಾಯಿಕ ಮಾರ್ವಾಡಿ ಕುಟುಂಬಕ್ಕೆ ಸೇರಿದ್ದರಿಂದ ಅವರು ಕೂಡ ಜೀವನಪರ್ಯಂತ ಟೀಟೋಟೇಲರ್ ಆಗಿದ್ದರು.

 ಅಜ್ಮೀರ್‌ನ ಮೇಯೊ ಕಾಲೇಜು ಮತ್ತು ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ ಕಾಲೇಜಿನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಲಲಿತ್‌ ಖೈತಾನ್‌ ಅಧ್ಯಯನ ಮಾಡಿದ್ದಾರೆ. ಅವರು ಬೆಂಗಳೂರಿನ ಬಿಎಂಎಸ್‌ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಇಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿದ್ದಾರೆ ಮತ್ತು USA ನ ಹಾರ್ವರ್ಡ್‌ನಿಂದ ಮ್ಯಾನೇಜಿರಿಯಲ್ ಫೈನಾನ್ಸ್ ಮತ್ತು ಅಕೌಂಟಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.

ಇಸ್ಲಾಂನಲ್ಲಿ ಮದ್ಯ ನಿಷೇಧ, ಆದರೂ ದೇಶದಲ್ಲಿ ಮದ್ಯ ತಯಾರಿಕೆಗೆ ಒಪ್ಪಿಗೆ ನೀಡಿದ ಗಲ್ಫ್‌ ದೇಶ!

ರಾಡಿಕೊ ಖೈತಾನ್ ಆರಂಭದಲ್ಲಿ ಬಾಟಲಿಂಗ್ ಪ್ಲಾಂಟ್ ಆಗಿ ಪ್ರಾರಂಭವಾಯಿತು ಮತ್ತು ನಂತರ ಬೃಹತ್ ಆಲ್ಕೋಹಾಲ್ ಘಟಕವನ್ನು ತಯಾರಿಸಿತ್ತು. ಆದರೆ ವ್ಯಾಪಾರವು ಕಷ್ಟಕರವಾದಂತೆ, ಲಲಿತ್ ಖೈತಾನ್ ತನ್ನ ಮಗ ಅಭಿಷೇಕ್ ಸಹಾಯದಿಂದ ಬ್ರ್ಯಾಂಡೆಡ್ ಪಾನೀಯಗಳನ್ನು ವಿಸ್ತರಿಸಲು ನಿರ್ಧರಿಸಿದರು. “ಒಂದೋ ದಿವಾಳಿಯಾಗಲಿ ಅಥವಾ ನಮ್ಮದೇ ಬ್ರಾಂಡ್‌ ರಚನೆಯಾಗಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಆಗ ನಾನು ನಮ್ಮದೇ ಬ್ರ್ಯಾಂಡ್ ಆರಂಭಿಸಲು ಕರೆ ತೆಗೆದುಕೊಂಡೆ” ಎಂದು ಅಭಿಷೇಕ್‌ ಖೈತಾನ್ ಫಾರ್ಚೂನ್‌ಗೆ ತಿಳಿಸಿದ್ದರು. ಇದರಿಂದಾಗಿ 8 PM ವಿಸ್ಕಿಯನ್ನು ಆಗಸ್ಟ್ 1998 ರಲ್ಲಿ ಪ್ರಾರಂಭಿಸಲಾಯಿತು. ಇಂದು, ಇದು ಭಾರತೀಯ ನಿರ್ಮಿತ ವಿದೇಶಿ ಮದ್ಯದ (IMFL) ಅತಿದೊಡ್ಡ ತಯಾರಕರಲ್ಲಿ ಈ ಕಂಪನಿಯೂ ಒಂದಾಗಿದೆ, ಅದರ ಬ್ರ್ಯಾಂಡ್‌ಗಳು 85 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಕಂಪನಿಯ ಪ್ರೀಮಿಯಂ ಬ್ರ್ಯಾಂಡ್‌ಗಳ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ತಂತ್ರವು ಫೋರ್ಬ್ಸ್‌ನ ಪ್ರಕಾರ ಶ್ರೀಮಂತ ಲಾಭಾಂಶವನ್ನು ನೀಡಿದೆ. ಇಂದು, ಇದು ಮಾರ್ಫಿಯಸ್ ಬ್ರಾಂಡಿ, ಆಫ್ಟರ್ ಡಾರ್ಕ್ ವಿಸ್ಕಿ, ರಾಂಪುರ್ ಸಿಂಗಲ್ ಮಾಲ್ಟ್, 1965-ಸ್ಪಿರಿಟ್ ಆಫ್ ವಿಕ್ಟರಿ ರಮ್ ಮತ್ತು ಜೈಸಲ್ಮೇರ್ ಐಷಾರಾಮಿ ಕ್ರಾಫ್ಟ್ ಜಿನ್, ಇತರವುಗಳನ್ನು ಒಳಗೊಂಡಿದೆ.

ಗ್ಯಾರಂಟಿ ಸರ್ಕಾರಕ್ಕೆ ಫೈನಾನ್ಸ್ ಬೂಸ್ಟರ್ ಕೊಟ್ಟ ಬಿಯರ್ ಪ್ರಿಯರು: 22,500 ಕೋಟಿ ರೂ. ಆದಾಯ

ಲಲಿತ್ ಖೈತಾನ್ ಅವರನ್ನು 2017ರಲ್ಲಿ ಯುಪಿಡಿಎ (ಉತ್ತರ ಪ್ರದೇಶ ಡಿಸ್ಟಿಲ್ಲರ್ಸ್ ಅಸೋಸಿಯೇಷನ್) ಯಿಂದ 'ಜೀವಮಾನ ಸಾಧನೆ ಪ್ರಶಸ್ತಿ' ಸೇರಿದಂತೆ ಹಲವಾರು ಗೌರವಗಳನ್ನು ಪಡೆದುಕೊಂಡಿದ್ದಾರೆ. ಅವರು 2008 ರ ಆಲ್ಕೋಬೆವ್‌ನಲ್ಲಿ ಕಾನ್ಫೆಡರೇಶನ್ ನಡೆಸಿದ 'ಸ್ಫೂರ್ತಿದಾಯಕ ಜೀವಮಾನದ ಸಾಧನೆ ಪ್ರಶಸ್ತಿ'ಯನ್ನೂ ಗೆದ್ದಿದ್ದಾರೆ.