ಸನಾತನ ಧರ್ಮ ಡೆಂಘೀ, ಮಲೇರಿಯಾವಲ್ಲ, ಏಡ್ಸ್ ರೋಗಿವಿದ್ದಂತೆ: ಎ. ರಾಜಾ

ಸನಾತನ ಮತ್ತು ವಿಶ್ವಕರ್ಮ ಯೋಜನೆ ಒಂದೇ. ಪ್ರಧಾನಿ ಮೋದಿಯವರು ಸನಾತನ ಧರ್ಮಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಎ. ರಾಜಾ ಹೇಳಿದ್ದಾರೆ.
 

First Published Sep 7, 2023, 12:21 PM IST | Last Updated Sep 7, 2023, 2:09 PM IST

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ತುಂಬಾ ಮೃದುವಾಗಿ ಮಾತನಾಡಿದ್ದಾರೆ. ಸನಾತನ(Sanatana) ಧರ್ಮವನ್ನು ಮಲೇರಿಯಾ, ಡೆಂಘಿಗೆ ಹೋಲಿಸಿದ್ದಾರೆ. ಮಲೇರಿಯಾಗೂ(Malaria), ಡೆಂಘೀ ನಂತ ರೋಗಗಳು ಸಾಮಾಜಿಕ ಪಿಡುಗು ಅಲ್ಲ. ಅದನ್ನು ಜನರು ಭಯದಿಂದ  ನೋಡುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕುಷ್ಠರೋಗ, ಎಚ್ಐವಿಯನ್ನು ಅಸಹ್ಯಕರವಾಗಿ ನೋಡಲಾಯಿತು. ಆದ್ದರಿಂದ ನಾವು ಇದನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಅವಸ್ಥೆಯಿಂದ ಕೂಡಿದ ಕಾಯಿಲೆಯಾಗಿ ನೋಡಬೇಕಾಗಿದೆ ಎಂದು ಎ. ರಾಜಾ(A Raja) ಹೇಳಿದ್ದಾರೆ. ಸನಾತನ ಮತ್ತು ವಿಶ್ವಕರ್ಮ ಯೋಜನೆ ಒಂದೇ. ಪ್ರಧಾನಿ ಮೋದಿಯವರು ಸನಾತನ ಧರ್ಮಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ಹಿಂದೂಗಳು ಸಮುದ್ರವನ್ನು ದಾಟುವುದಿಲ್ಲ ಎಂದು ಅವರು ಅದನ್ನು ಮಾಡುತ್ತಿಲ್ಲ. ಯಾರನ್ನಾದರೂ ತನ್ನಿ, ನಾನು ಸನಾತನ ಧರ್ಮದ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಅವರು ಯಾವುದೇ ರೀತಿಯ ಆಯುಧಗಳನ್ನು ಹೊಂದಲಿ, ನಾನು ದೆಹಲಿಯಲ್ಲಿ ಪೆರಿಯಾರ್ ಮತ್ತು ಅಂಬೇಡ್ಕರ್ (Ambedkar) ಪುಸ್ತಕಗಳೊಂದಿಗೆ ಚರ್ಚೆಗೆ ಬರುತ್ತೇನೆ ಎಂದು ಎ. ರಾಜಾ ಹೇಳಿದರು. ನಾನು ಕೇವಲ ಪಂಚಮ ಸೂತ್ರದವನು, ಅವರು ವಿಶ್ವಗುರುವಿನ ಮುಂದೆ ಬಂದು ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಸ್ಟಾಲಿನ್ ಪುತ್ರನ ಹಠ: ವಿಪಕ್ಷಗಳ ಮೈತ್ರಿಕೂಟಕ್ಕೆ ಸಂಕಟ

Video Top Stories