ಸ್ಟಾಲಿನ್ ಪುತ್ರನ ಹಠ: ವಿಪಕ್ಷಗಳ ಮೈತ್ರಿಕೂಟಕ್ಕೆ ಸಂಕಟ

ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿದ ವಿವಾದಿತ ಹೇಳಿಕೆ ಇಂಡಿಯಾ ಮೈತ್ರಿಕೂಟವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.   ಉದಯನಿಧಿಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಆಗದೇ ಅತ್ತ ವಿರೋಧಿಸಲು ಆಗದೇ ಸಂಕಷ್ಟಕ್ಕೆ ಸಿಲುಕಿದೆ ಇಂಡಿಯಾ ಕೂಟ, ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp


ಸ್ಟಾಲಿನ್ ಪುತ್ರ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹಿಂದೂ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ದೇಶದಲ್ಲಿ ವಿವಾದ ಕಿಡಿ ಹಚ್ಚಿರುವುದು ಗೊತ್ತೇ ಇದೆ. ಉದಯನಿಧಿ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ 260ಕ್ಕೂ ಹೆಚ್ಚು ಜನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೂ ಪತ್ರ ಬರೆದಿದ್ದಾರೆ. ಉದಯನಿಧಿ ಹೇಳಿಕೆಯಿಂದ ಸಿಟ್ಟಿಗೆದ್ದಿರುವ ಅಯೋಧ್ಯಾ ಶ್ರೀ ಪರಮಹಂಸ ಗುರೂಜಿ ಉದಯನಿಧಿ ತಲೆ ಕಡಿದವರಿಗೆ ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಆದರೆ ಇಂತದ್ದಕ್ಕೆಲ್ಲಾ ನಾ ಹೆದರುವುದಿಲ್ಲ, ನಾನೂ ಈಗಲೂ ಆ ಹೇಳಿಕೆಗೆ ಬದ್ಧನಾಗಿರುವೆ ಎಂದು ಉದಯನಿಧಿ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಆದರೆ ಇದರಿಂದ ನಿಜವಾಗಿಯೂ ಸಂಕಟ ಎದುರಾಗಿರುವುದು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ. ಬಿಜೆಪಿ ಇದನ್ನೇ ಚುನಾವಣಾ ಅಸ್ತ್ರವನ್ನಾಗಿಸಿ ಇಂಡಿಯಾ ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ ಇತ್ತ ತಮ್ಮ ಪಾಳಯದಲ್ಲಿರುವ ಉದಯನಿಧಿಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಆಗದೇ ಅತ್ತ ವಿರೋಧಿಸಲು ಆಗದೇ ಸಂಕಷ್ಟಕ್ಕೆ ಸಿಲುಕಿದೆ ಇಂಡಿಯಾ ಕೂಟ, ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ

Related Video