CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ ಅನಾವರಣ: 260 ಸಾಹಸಿಗಳಿಂದ ಬೈಕ್‌ ಮೇಲೆ ಡೇರ್‌ಡೆವಿಲ್‌ ಸ್ಟಂಟ್ಸ್‌

CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ ಅನಾವರಣ
260 ಸಾಹಸಿಗಳಿಂದ ಬೈಕ್ ಮೇಲೆ ಡೇರ್‌ಡೆವಿಲ್ ಸ್ಟಂಟ್ಸ್
ನಾರೀ ಶಕ್ತಿಯ ಧೈರ್ಯ,ಶೌರ್ಯ,ಬದ್ಧತೆ ಸಾಕ್ಷಿ ಈ ಸಾಹಸ

Share this Video
  • FB
  • Linkdin
  • Whatsapp

75ನೇ ಗಣತಂತ್ರದ ಹಬ್ಬಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ಕರ್ತವ್ಯ ಪಥದಲ್ಲಿ 75ನೇ ಗಣರಾಜ್ಯೋತ್ಸವ(Republic Day) ಪರೇಡ್(Parade) ಸಂಭ್ರಮ ಮೂಡಿದೆ. ಈ ಬಾರಿ ಗಣರಾಜ್ಯೋತ್ಸವ ಮಹಿಳಾ ಪ್ರಧಾನವಾಗಿದೆ. CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ(Shri Shakti) ಅನಾವರಣ ಮಾಡಲಾಯಿತು. 260 ಸಾಹಸಿಗಳಿಂದ ಬೈಕ್ ಮೇಲೆ ಡೇರ್‌ಡೇವಿಲ್‌ ಸ್ಟಂಟ್ಸ್‌ ತೋರಿಸಲಾಯಿತು. ನಾರೀ ಶಕ್ತಿಯ ಧೈರ್ಯ, ಶೌರ್ಯ, ಬದ್ಧತೆಗೆ ಈ ಸಾಹಸ ಸಾಕ್ಷಿಯಾಯಿತು. ಚಂದ್ರಯಾನ, ಸರ್ವತ್ರ ಸುರಕ್ಷಾ, ಅಭಿವಂದನ, ಯೋಗ ಥೀಮ್‌ನಲ್ಲಿ ಸಾಹಸ ಪ್ರದರ್ಶನ ಮಾಡಲಾಯಿತು. ರೋಮಾಂಚನಗೊಳಿಸುವ ಸ್ಟಂಟ್‌ಗಳ ಮೂಲಕ ಮಹಿಳಾ ಪಡೆ(Women Force) ಎಲ್ಲಾರ ಮನಗೆದ್ದಿತು. ಬೈಕ್‌ಗಳ ಮೇಲೆ ಕಣ್ಮನ ಸೆಳೆಯುವ ಪ್ರಮೀಳಾ ಪರಾಕ್ರಮ ಪ್ರದರ್ಶನ ನೀಡಲಾಯಿತು. ಕರ್ತವ್ಯಪಥದ ಆಗಸದಲ್ಲಿ ಭಾರತೀಯ ವಾಯುಶಕ್ತಿಯ ಪ್ರದರ್ಶನವನ್ನು ತೋರಿಸಲಾಯಿತು.

ಇದನ್ನೂ ವೀಕ್ಷಿಸಿ: Darshan: ದರ್ಶನ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಯಾರು..? ಪವಿತ್ರಾ ಗೌಡ ಹಾಕಿರೋ ಪೋಸ್ಟ್‌ನಲ್ಲಿ ಏನಿತ್ತು..?

Related Video