Asianet Suvarna News Asianet Suvarna News

24 ಗಂಟೆ, 24 ದೇಶ, ಪತ್ತೆಯಾಗಿದ್ದು 5 ಲಕ್ಷ ಡೆಲ್ಟಾ ಕೇಸ್, ಕೊರೋನಾಗಿಂತ ಮೋಸ್ಟ್ ಡೇಂಜರಸ್.!

Jul 12, 2021, 12:26 PM IST

ಬೆಂಗಳೂರು (ಜು. 12):  ‘ವಿಶ್ವದ ಹಲವು ಭಾಗಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಧಾನವಾಗುತ್ತಿಲ್ಲ. ಭಾರತದಲ್ಲಿ ಮೊದಲು ಪತ್ತೆಯಾದ ಕೊರೋನಾದ ರೂಪಾಂತರಿ ತಳಿ ಡೆಲ್ಟಾದಿಂದಾಗಿ ಸೋಂಕು ಹೆಚ್ಚಾಗುತ್ತಿದೆ. ಕಳೆದ 24 ತಾಸುಗಳಲ್ಲಿ 5 ಲಕ್ಷ ಹೊಸ ಸೋಂಕಿತರು, 9300 ಸಾವುಗಳು ವರದಿಯಾಗಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಡೆಲ್ಟಾ ಮಾತ್ರವಲ್ಲ, ಝೀಕಾ ವೈರಸ್‌ ಆತಂಕ ಕೂಡಾ ಹೆಚ್ಚಾಗಿದೆ. 

ಲಸಿಕೆ ಪಡೆದರೂ ಡೆಲ್ಟಾ ಡೇಂಜರ್; ರಾಜ್ಯದಲ್ಲೂ ರೂಪಾಂತರಿಯಿಂದ ಅವಾಂತರ..!

 ಕೇರಳದಲ್ಲಿ ಮತ್ತೆ 12,220 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 97 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಏತನ್ಮಧ್ಯೆ, ರಾಜ್ಯದಲ್ಲಿ ಭಾನುವಾರ ಮತ್ತೆ ಮೂರು ಮಂದಿಯಲ್ಲಿ ಝೀಕಾ ವೈರಸ್‌ ಪತ್ತೆಯಾಗಿದ್ದು, ಒಟ್ಟು ಝೀಕಾ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ.