Asianet Suvarna News Asianet Suvarna News

ಲಸಿಕೆ ಪಡೆದರೂ ಡೆಲ್ಟಾ ಡೇಂಜರ್‌; ರಾಜ್ಯದಲ್ಲೂ ರೂಪಾಂತರಿಯಿಂದ ಅವಾಂತರ..!

- ಲಸಿಕೆ ಪಡೆದರೂ ಡೆಲ್ಟಾ ಡೇಂಜರ್‌!

- 2 ಡೋಸ್‌ ಪಡೆದ ಶೇ.16 ರಷ್ಟುಜನರಲ್ಲಿ ಡೆಲ್ಟಾವಿರುದ್ಧ ಪ್ರತಿಕಾಯಗಳೇ ಇಲ್ಲ

-  ಸೋಂಕು ಪತ್ತೆ, ಸಂಪರ್ಕ ಪತ್ತೆ, ಐಸೋಲೇಶನ್‌ ಹಾಗೂ ಚಿಕಿತ್ಸೆಯನ್ನು ತೀವ್ರಗೊಳಿಸಿ: WHO

ಬೆಂಗಳೂರು (ಜು. 05): ಭಾರತದಲ್ಲಿ ಮೊದಲು ಪತ್ತೆಯಾದ ಹಾಗೂ ದೇಶದಲ್ಲಿ ಎರಡನೇ ಅಲೆ ಅಬ್ಬರಿಸಲು ಕಾರಣ ಎನ್ನಲಾಗಿರುವ ಡೆಲ್ಟಾ ವೈರಸ್‌ ಅತ್ಯಂತ ವೇಗವಾಗಿ ಹಬ್ಬುವ ಕೊರೋನಾ ಸೋಂಕಾಗಿದೆ. ಈಗಾಗಲೇ ವಿಶ್ವದ 100 ದೇಶಗಳಿಗೆ ಇದು ಹಬ್ಬಿದ್ದು, ಆ ದೇಶಗಳನ್ನು ಭೀತಿಗೆ ದೂಡಿದೆ. ಇಂತಹ ಸಂದರ್ಭದಲ್ಲಿ ಎರಡೂ ಡೋಸ್‌ ಲಸಿಕೆ ಪಡೆದವರಲ್ಲೂ ಡೆಲ್ಟಾವಿರುದ್ಧದ ಪ್ರತಿಕಾಯಗಳೇ ಕಂಡು ಬಂದಿಲ್ಲ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. 

ಡೆಲ್ಟಾರೂಪಾಂತರಿ ತಳಿಯ ಹೊಡೆತದಿಂದ ಇನ್ನೂ ಯಾವುದೇ ದೇಶ ಹೊರಬಂದಿಲ್ಲ. ಈ ತಳಿ 98 ದೇಶಗಳಲ್ಲಿ ಶರವೇಗದಲ್ಲಿ ಹರಡುತ್ತಿದೆ. ಇನ್ನೂ ಬದಲಾಗುತ್ತಾ, ರೂಪಾಂತರ ಹೊಂದುತ್ತಾ ಹೋಗುತ್ತಿದೆ. ಹೀಗಾಗಿ ದೇಶಗಳು ಸೋಂಕು ಪತ್ತೆ, ಸಂಪರ್ಕ ಪತ್ತೆ, ಐಸೋಲೇಶನ್‌ ಹಾಗೂ ಚಿಕಿತ್ಸೆಯನ್ನು ತೀವ್ರಗೊಳಿಸಬೇಕು. ಮಾಸ್ಕ್‌, ಸಾಮಾಜಿಕ ಅಂತರ ಮುಂದುವರೆಸಬೇಕು’ ಎಂದು WHO ಹೇಳಿದೆ. 

Video Top Stories