Video : ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ?

*ರಾಜ್ಯ ಹಾಗೂ ದೇಶಾದ್ಯಂತ ಧಾರಾಕಾರ ಮಳೆ!
*ದಿನದಿಂದ ದಿನಕ್ಕೆ ಹದಗೆಡುತ್ತಿದೆ ಪರಿಸ್ಥಿತಿ 
*ಅತೀವ ಮಳಗೆ ಕಾರಣವಾಯಿತಾ ಚಂದ್ರಗ್ರಹಣ
*ಚಂದ್ರಗ್ರಹಣಕ್ಕೂ ಈ ಮಳೆಗೂ  ಸಂಬಂಧ ಇದೆಯಾ?
*580 ವರ್ಷಗಳ ನಂತರ ಸಂಭವಿಸುತ್ತಿರುವ ಚಂದ್ರಗ್ರಹಣ

Share this Video
  • FB
  • Linkdin
  • Whatsapp

ಬೆಂಗಳೂರು(ನ.18):  ಈ ತಿಂಗಳ ಕಾರ್ತಿಕ ಪೂರ್ಣಿಮೆ (Kartik Purnima) ವಿಶೇಷವಾಗಿರಲಿದೆ. ಯಾಕೆಂದರೆ, ಅಂದು ಅಂದರೆ ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ (lunar eclipse) ನಡೆಯಲಿದೆ. ನಮ್ಮ ರಾಜ್ಯದಲ್ಲಿ ಈ ಗ್ರಹಣ ಗೋಚರಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಮಧ್ಯೆ ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ನಿರಂತರ ಮಳೆ ಸುರಿಯುತ್ತಲೇ ಇದೆ. ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಮುಂದೆ ಬರುವ ಚಂದ್ರಗ್ರಹಣಕ್ಕೂ ಈ ಮಳೆಗೂ ಏನಾದ್ರು ಸಂಬಂಧ ಇದೆಯಾ? ಅತೀವ ಮಳೆಗೆ ಕಾರಣಾವಾಯಿತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ ಎಂಬ ಕೂತುಹಲ ಮೂಡಿದೆ.

Add Asianetnews Kannada as a Preferred SourcegooglePreferred

ನ.19ಕ್ಕೆ ಶತಮಾನದ ಸುದೀರ್ಘ ಚಂದ್ರ ಗ್ರಹಣ, ರಾಜ್ಯದಲ್ಲಿ ಗೋಚರಿಸುತ್ತಾ?

ಹೌದು ಎನ್ನುತ್ತೆ ಲೆಕ್ಕಾಚಾರ! ವಿಶೇಷವಾಗಿ ಚಂದ್ರ (Moon) ಮತ್ತು ಭೂಮಿಯ (Earth) ನಡುವಿನ ಅಂತರದಿಂದಾಗಿ ಈ ಗ್ರಹಣ ದೀರ್ಘಾವದಿಯಾಗಿರುತ್ತದೆ. ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ (lunar eclipse) ಎನಿಸಿಕೊಳ್ಳಲಿದೆ. ಈ ಚಂದ್ರಗ್ರಹಣ ಬರೊಬ್ಬರಿ 580 ವರ್ಷಳ ನಂತರ ಸಂಭವಿಸುತ್ತಿದೆ. ಈ ಹಿಂದೆ 18 ಫೆಬ್ರುವರಿ 1440 ರಂದು ಈ ರೀತಿ ಚಂದ್ರಗ್ರಹಣ ಸಂಭವಿಸಿತ್ತು. ನಾಳೆ ಸಂಭವಿಸಿದ್ರೆ ಈ ಚಂದ್ರಗ್ರಹಣ ಮತ್ತೆ ಬರುವುದು 18 ಫೆಬ್ರುವರಿ 2690 ನೇ ಇಸವಿಗೆ. ಯಾವುದೇ ಗ್ರಹಣ ದೀರ್ಘ ಕಾಲದ ನಂತರ ಮರುಕಳಿಸಿದರೆ ಜಗತ್ತಿಗೆ ಎನಾದ್ರೂ ಒಂದು ಕಂಟಕ, ಅನಾಹುತ ತಪ್ಪಿದ್ದಲ್ಲ ಅನ್ನೊ ವಾಡಿಕೆ ಇದೆ. ಹಾಗಾಗಿ ಈ ಗ್ರಹಣ ಮಳೆಯ ಮೂಲಕ ಕೇಡು ತರುತ್ತಿದೆ ಎಂಬ ಅನುಮಾನ ಹಲವರಲ್ಲಿದೆ.

Related Video