
ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
ಮಹಾರಾಷ್ಟ್ರ ರಾಜಕಾರಣದ 'ಕಿಂಗ್ ಮೇಕರ್' ಅಜಿತ್ ಪವಾರ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವು ಆಕಸ್ಮಿಕವೋ ಅಥವಾ ವ್ಯವಸ್ಥಿತ ಹತ್ಯೆಯೋ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಈ ಸಾವಿನ ಸುತ್ತ ಪಿತೂರಿಯ ನೆರಳು ದಟ್ಟವಾಗಿದೆ. ಈ ಘಟನೆಯು ರಾಷ್ಟ್ರ ರಾಜಕಾರಣದಲ್ಲಿಯೂ ತೀವ್ರ ಕಂಪನ ಸೃಷ್ಟಿಸಿದೆ.
ಅಜಿತ್ ಪವಾರ್ ಅವರ ಸಾವು, ಮಹಾರಾಷ್ಟ್ರದಲ್ಲಿ ಮಾತ್ರವೇ ಅಲ್ಲ.. ರಾಷ್ಟ್ರ ಮಟ್ಟದಲ್ಲೂ ಕಂಪನ ಸೃಷ್ಟಿಸಿದೆ.. ದೊಡ್ಡ ದೊಡ್ಡ ಪಟ್ಟದ ಮೇಲೆ ಕಣ್ಣಿಟ್ಟು ಕಾಯ್ತಾ ಇದ್ದ, ಮಹಾತ್ವಾಕಾಂಕ್ಷಿ ನಾಯಕರ ದುರಂತ, ದೇಶವನ್ನೇ ಬೆಚ್ಚಿಬೀಳಿಸಿದೆ.. ಅಷ್ಟಕ್ಕೂ, ಮಹಾರಾಷ್ಟ್ರ ರಾಜಕಾರಣದಲ್ಲಿ ಇವರ ಪಾತ್ರ ಎಂಥಾದ್ದು ಗೊತ್ತಾ? ಸರ್ಕಾರದ ಭವಿಷ್ಯವನ್ನೇ ನಿರ್ಧರಿಸಬಲ್ಲ ನಾಯಕ, ಈಗ ಗುರುತೂ ಸಿಗದ ಹಾಗೆ ದಹಿಸಿ ಜೀವ ಬಿಟ್ಟಿದ್ದಾರೆ.. ಅವರ ಸಾವಿನ ಹಿಂದೆ ನಿಗೂಢತೆಯೊಂದು ಅಡಗಿದೆ ಅನ್ನೋ ಮಾತಿದೆ.
ಈ ಮಹಾದುರಂತದ ಬೆನ್ನಲ್ಲೇ, ಇಂಥಾ ಸ್ಫೋಟಕ ಹೇಳಿಕೆ ಅಡಗಿರೋಕೆ ಸಾಧ್ಯ ಅಂತ, ಯಾರಿಗಾದ್ರೂ ಊಹಿಸೋಕ್ಕಾದ್ರೂ ಸಾಧ್ಯವಾ? ಇಲ್ವೇ ಇಲ್ಲ.. ಹಾಗಾದ್ರೆ, ಮಮತಾ ಬ್ಯಾನರ್ಜಿ ಈ ಮಾತು ಹೇಳಿದ್ಯಾಕೆ? ಅಜಿತ್ ಪವಾರ್ ಅವರ ಪವರ್ ಈಗ ಯಾರ ವಶವಾಗಲಿದೆ? ಮಹಾರಾಜಕಾರಣದಲ್ಲಿ ಮುಂದೇನಾಗಲಿದೆ? ಅಜಿತ್ ಪವಾರ್ ಅವರ ಸಾವಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಗಳು ಈಗ ದೊಡ್ಡ ಸದ್ದು ಮಾಡುತ್ತಿವೆ.. ಅದ್ಯಾಕೆ ಗೊತ್ತಾ?
ಅಜಿತ್ ಪವಾರ್.. ಈ ಹೆಸರು, ಮಹಾರಾಷ್ಟ್ರ ರಾಜಕಾರಣದಲ್ಲಿ ಯಾರೂ ಊಹಿಸೋಕೂ ಸಾಧ್ಯವಾಗದ ಹಾಗೆ ಗಟ್ಟಿಯಾಗಿ ನೆಲೆಯೂರಿತ್ತು.. ಇವರ ಸಹಾಯವಿಲ್ಲದೆ, ಸ್ನೇಹಿತರಿಗೆ ಗೆಲವು ದಕ್ಕುತ್ತಿರಲಿಲ್ಲ.. ಇವರಿಗೆ ಸವಾಲು ಹಾಕಿ, ಶತ್ರುಪಾಳೆಯ ಗೆಲ್ಲೂಕೂ ಆಗ್ತಾ ಇರ್ಲಿಲ್ಲ.. ಅಜಿತ್ ಪವಾರ್ ಯಾರ ಪರ ಇರ್ತಾರೋ, ಅವರ ಕೈಲಿ ಪೊಲಿಟಿಕಲ್ ಪವರ್ ಇರ್ತಾ ಇತ್ತು.. ಆದ್ರೆ, ಇಂಥಾ ಕಿಂಗ್ ಮೇಕರ್, ಈಗ ದಾರುಣವಾಗಿ ಸಾವಿಗೀಡಾಗಿದ್ದಾರೆ.. ಅದೂ ಕೂಡ, ಅತಿ ಭಯಾನಕ ರೀತಿಯಲ್ಲಿ.. ಆ ಸಾವು, ಸಾವಿನ ಸುತ್ತಲೂ ಇರೋ ರಾಜಕೀಯ, ರಾಜಕೀಯದ ಬೆನ್ನಿಗೇ ಅಂಟಿಕೊಂಡಿರೋ ಸಂಚಿನ ಸುರುಳಿ, ಎಲ್ಲವನ್ನೂ ನಿಮ್ಮ ಮುಂದೆ, ಒಂದೊಂದಾಗೇ ಬಿಚ್ಚಿಡ್ತಿದ್ದೀವಿ ನೋಡಿ..