ಫೆಂಗಲ್ ಆರ್ಭಟಕ್ಕೆ 30 ವರ್ಷದಲ್ಲೇ ದಾಖಲೆ ಮಳೆ:16 ಗಂಟೆ ವಿಮಾನ ಹಾರಾಟ ನಿಲ್ಲಿಸಿದ್ದ ಚೆನ್ನೈ ಏರ್ ಪೋರ್ಟ್
ಫೆಂಗಲ್ ಚಂಡಮಾರುತ ತಮಿಳುನಾಡಿನಲ್ಲಿ ಭಾರೀ ಮಳೆ ಮತ್ತು ಅನಾಹುತವನ್ನು ಸೃಷ್ಟಿಸಿದೆ. ಪುದುಚೇರಿಯಲ್ಲಿ ದಾಖಲೆ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪ್ರಭಾವ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲೂ ಕಂಡುಬರಲಿದೆ.
ಶ್ರೀಲಂಕಾ ನಂತರ ತಮಿಳುನಾಡಿನಲ್ಲಿ ಡೆಡ್ಲಿ ಫೆಂಗಲ್ ಚಂಡಮಾರುತ ಅಬ್ಬರಿಸುತ್ತಿದೆ. ತಮಿಳುನಾಡಿನ ಕರಾವಳಿ ಪ್ರದೇಶಗಳನ್ನು ಅಕ್ಷರಶಃ ಲಾಕ್ ಮಾಡಿ ಇಟ್ಟುಕೊಂಡಿರುವ ಡೆಡ್ಲಿ ಫೆಂಗಲ್, ಬಿಟ್ಟು ಬಿಡದಂತೆ ಮಳೆ ಸುರಿಸುತ್ತಿದೆ. ಕಳೆದ ಮೂರು ದಿನಗಳಿಂದ ಫೆಂಗಲ್ ಆರ್ಭಟಕ್ಕೆ ತಮಿಳುನಾಡು ಸುಸ್ತಾಗಿದೆ. ತಮಿಳು ಕರಾವಳಿ ಪ್ರದೇಶಗಳ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಭಾರತೀಯ ಹವಾಮಾನ ಇಲಾಖೆ ಹೇಳಿದಂತೆ ಡಿಸೆಂಬರ್ 2ಕ್ಕೆ ಚಂಡಮಾರುತದ ಅಬ್ಬರ ಕಡಿಮೆ ಆದ್ರೆ ಓಕೆ. ಇಲ್ದಿದ್ರೆ ತಮಿಳುನಾಡು ದೊಡ್ಡ ತೊಂದರೆಯನ್ನು ಎದುರಿಸಬೇಕಾಗಬಹುದು. ಇನ್ನು ಈ ಫೆಂಗಲ್ ಚಂಡಮಾರುತದ ಪ್ರಭಾವ ಕರ್ನಾಟಕದಲ್ಲಿ ಹೇಗಿದೆ ?ಈಗಾಗಲೇ ಶ್ರೀಲಂಕಾದಲ್ಲಿ ಅಬ್ಬರಿಸಿ ತಮಿಳುನಾಡಿಲ್ಲಿ ದೊಡ್ಡ ಭಯವನ್ನೇ ಹುಟ್ಟಿಸಿರೋ ಫೆಂಗಲ್ ಚಂಡಮಾರುತಕ್ಕೆ ಕರ್ನಾಟಕವೂ ಒಂದಿಷ್ಟು ನಡುಗುತ್ತಿದೆ. ಅಷ್ಟಾಗಿ ಮಳೆ ಇಲ್ಲದಿದ್ದರೂ ರಾಜ್ಯದಲ್ಲಿ ವಾತಾವರಣ ತುಂಬಾನೇ ಬದಲಾಗಿದೆ. ಹಾಗಿದ್ರೆ ರಾಜ್ಯಕ್ಕೆ ಮುಂದೆ ಕಾದಿದೆಯಾ ಫೆಂಗಲ್ ದಾಳಿ? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಫೆಂಗಲ್ ದಂಗಲ್.