ಈ ಜೇನುತುಪ್ಪವನ್ನು ಬಳಸುವ ಮುನ್ನ ಎಚ್ಚರ; ಸಂಶೋಧನೆ ಹೇಳ್ತಿದೆ ಭಯಂಕರ ವಿಚಾರ!

ಪತಂಜಲಿ ಜೇನುತುಪ್ಪ, ಡಾಬರ್ ಜೇನುತುಪ್ಪ, ಪರಿಶುದ್ಧ ಜೇನುತುಪ್ಪ, ಆರೋಗ್ಯಕ್ಕೆ ಒಳ್ಳೆಯದು ಎಂದು ತೆಗೆದುಕೊಳ್ಳುತ್ತೇವೆ. ನಾವು ತಿನ್ನುತ್ತಿರುವುದು ಶುದ್ಧವಾದ ಜೇನುತುಪ್ಪ ಎಂದುಕೊಳ್ಳುತ್ತೇವೆ. ಆದರೆ ಇದೂ ಕಲಬೆರಕೆ ಎಂದು ಸಂಶೋಧನೆ ಹೇಳಿದೆ. 

First Published Dec 4, 2020, 4:53 PM IST | Last Updated Dec 4, 2020, 4:58 PM IST

ಬೆಂಗಳೂರು (ಡಿ. 04): ಪತಂಜಲಿ ಜೇನುತುಪ್ಪ, ಡಾಬರ್ ಜೇನುತುಪ್ಪ, ಪರಿಶುದ್ಧ ಜೇನುತುಪ್ಪ, ಆರೋಗ್ಯಕ್ಕೆ ಒಳ್ಳೆಯದು ಎಂದು ತೆಗೆದುಕೊಳ್ಳುತ್ತೇವೆ. ನಾವು ತಿನ್ನುತ್ತಿರುವುದು ಶುದ್ಧವಾದ ಜೇನುತುಪ್ಪ ಎಂದುಕೊಳ್ಳುತ್ತೇವೆ. ಆದರೆ ಇದೂ ಕಲಬೆರಕೆ ಎಂದು ಸಂಶೋಧನೆ ಹೇಳಿದೆ. ಈ ಜೇನುತುಪ್ಪದಲ್ಲಿ ಸಕ್ಕರೆ ಸಿರಪ್‌ ಮಿಶ್ರಣವಾಗಿದೆ ಎಂಬ ಆತಂಕಕಾರಿ ವಿಷಯವನ್ನು ಪರಿಸರದ ಮೇಲೆ ನಿಗಾ ಇಡುವ ‘ಸೆಂಟರ್‌ ಫಾರ್‌ ಸೈನ್ಸ್‌ ಆ್ಯಂಡ್‌ ಎನ್ವಿರಾನ್‌ಮೆಂಟ್‌’ (ಸಿಎಸ್‌ಇ) ಸಂಸ್ಥೆ ಸಂಶೋಧಕರು ಹೇಳಿದ್ದಾರೆ. 

ವಾಷಿಂಗ್‌ ಮಷಿನ್‌ನೊಳಗೆ ಸಿಕ್ಕಾಕಿಕೊಂಡ ಲವರ್, ಬೆಕ್ಕಿನ ಪರದಾಟ ನೀವೇ ನೋಡಿ..!

ಚೀನಾದ ಟ್ರೇಡ್‌ ಪೋರ್ಟಲ್‌ಗಳು ಸಕ್ಕರೆ ಸಿರಪ್‌ ಪೂರೈಸುತ್ತವೆ. ದೇಶದ ಪ್ರಯೋಗಾಲಯಗಳಲ್ಲಿ ತಪಾಸಣೆಯಲ್ಲೂ ಪತ್ತೆಯಾಗದಂತ ಅಂಶಗಳನ್ನು ಆ ಸಿರಪ್‌ಗಳಲ್ಲಿ ಸೇರಿಸಲಾಗುತ್ತದೆ. ಈ ಕುರಿತು ಸ್ಟಿಂಗ್‌ ಆಪರೇಶನ್‌ ನಡೆಸಿದಾಗ ಅದು ದೃಢಪಟ್ಟಿದೆ ಎಂದು ಸಿಎಸ್‌ಇ ಮಹಾನಿರ್ದೇಶಕಿ ಸುನಿತಾ ನಾರಾಯಣ್‌ ಹೇಳಿದ್ದಾರೆ. ಆದರೆ ಕೊನೆಗೆ ಜರ್ಮನಿ ಪ್ರಯೋಗಾಲಯದಲ್ಲಿ 13 ಬ್ರಾಂಡ್‌ಗಳನ್ನು ತಪಾಸಣೆಗೆ ಒಳಪಡಿಸಿದಾಗ 8 ಬ್ರಾಂಡ್‌ಗಳಲ್ಲಿ ಕಲಬೆರಕೆ ಪತ್ತೆಯಾಗಿದೆ ಎಂದು ವರದಿ ಹೇಳಿದೆ. ಹಾಗಾಗಿ ಜೇನುತುಪ್ಪವನ್ನು ತಿನ್ನುವಾಗ ಇರಲಿ ಎಚ್ಚರ..!

Video Top Stories