ಟ್ರಕ್ ಮೇಲೆತ್ತುವಾಗ ನೀರಿಗೆ ಬಿದ್ದ ಕ್ರೇನ್!

ನೀರಿಗೆ ಬಿದ್ದ ಟ್ರಕ್ಕೊಂದನ್ನು ಎಳೆಯಲು ಹೋದ ಕ್ರೇನ್‌ ಒಂದು ಸೇತುವೆಯಿಂದ ಆಯತಪ್ಪಿ ನೀರಿಗೆ ಬಿದ್ದ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

First Published Aug 7, 2022, 5:40 PM IST | Last Updated Aug 7, 2022, 5:40 PM IST

ಟ್ರಕ್‌ ಮೇಲೆತ್ತುವಾಗ ಕ್ರೇನ್ ಒಂದು ನೀರಿಗೆ ಬಿದ್ದ ಘಟನೆ ಒಡಿಶಾದ ತಲ್ಚೇರ್ ನಗರದಲ್ಲಿ ನಡೆದಿದೆ. ಸೇತುವೆಯಿಂದ ನೀರಿಗೆ ಬಿದ್ದ ಟ್ರಕ್ಕೊಂದನ್ನು ಮೇಲೆತ್ತಲು ಎರಡು ಕ್ರೇನ್‌ಗಳನ್ನು ಕರೆತರಲಾಗಿತ್ತು. ಎರಡು ಕ್ರೇನ್‌ಗಳು ಸೇರಿ ಟ್ರಕ್‌ ಅನ್ನು ಮೇಲೆತ್ತುತ್ತಿದ್ದವು. ಈ ವೇಳೆ ಒಂದು ಕ್ರೇನ್‌ನ ಕೇಬಲ್‌ ಒಮ್ಮೆಗೆ ಕಟ್ ಆಗಿದ್ದು, ಪರಿಣಾಮ ಒಂದೇ ಟ್ರಕ್‌ನ ಮೇಲೆ ಎಲ್ಲಾ ಭಾರವು ಬಿದ್ದಿದ್ದು ಕ್ರೇನ್‌ ಕೂಡ ನೀರಿಗೆ ಬಿದ್ದಿದೆ. ಈ ವೇಳೆ ಕ್ರೇನ್‌ ಒಳಗೆ ಇದ್ದ ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಕ್ರೇನ್‌ ಒಳಗಿನಿಂದ ಪಾರಾಗಿ ನೀರಿನಲ್ಲಿ ಈಜಿ ಚಾಲಕ ದಡ ಸೇರಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.