COVID-19 Vaccine Prevent Death: ಸಾವು ತಡೆಗಟ್ಟುತ್ತೆ ವ್ಯಾಕ್ಸಿನ್, ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್ ಅಧ್ಯಯನ ವರದಿ

ಕೋವಿಡ್ ಮೂರನೇ ಅಲೆಯಲ್ಲಿ ಕೇಸಿನ ಸಂಖ್ಯೆ ಹೆಚ್ಚಿದ್ದರೂ ಇದ್ದರೂ ಸಾವಿನ ಪ್ರಮಾಣ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಮುಖ್ಯ ಕಾರಣ ವ್ಯಾಕ್ಸಿನ್ ಎಂದು ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆ ಅಧ್ಯಯನ ವರದಿ ಹೇಳಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜ.24): ಕೊರೊನಾ ಮೂರನೇ ಅಲೆ ದೇಶದಾದ್ಯಂತ ವೇಗವಾಗಿ ಹರಡುತ್ತಿದೆ. ಆದರೆ ಇದರ ಅಬ್ಬರ ತೀರ ಕಡಿಮೆ ಇದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆ ಇದೆ. ಇದೆಲ್ಲದರ ನಡುವೆ ಸಾವಿನ ಸಂಖ್ಯೆ ಕೂಡ ತೀರಾ ಕಡಿಮೆ ಇದೆ. ಮೊದಲನೆ ಅಲೆಯಲ್ಲಿ ಸಾವು-ನೋವಿನ ಪ್ರಮಾಣ ಮಧ್ಯಮವಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಸಾವು ನೋವಿನ ಪ್ರಮಾಣ ಹೇಳ ತೀರದಷ್ಟು ಉನ್ನತ ಮಟ್ಟದಲ್ಲಿ ಇತ್ತು. ಇದೀಗ ಮೂರನೇ ಅಲೆಯಲ್ಲಿ ಕೇಸಿನ ಸಂಖ್ಯೆ ಹೆಚ್ಚಿದ್ದರೂ ಇದ್ದರೂ ಸಾವಿನ ಪ್ರಮಾಣ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಮುಖ್ಯ ಕಾರಣ ವ್ಯಾಕ್ಸಿನ್. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಮಿಕ್ರಾನ್ ಹೊಸ ತಳಿ BA.2 ಎಷ್ಟು ಅಪಾಯಕಾರಿ? ಭಾರತದಲ್ಲಿ 530 ಮಂದಿಯಲ್ಲಿ ಪತ್ತೆ!

ಮೂರನೇ ಅಲೆಯಲ್ಲಿ ವ್ಯಾಕ್ಸಿನ್ ಬ್ರಹ್ಮಾಸ್ತ್ರವಾಗಿ ಕೆಲಸ ಮಾಡುತ್ತಿದೆಯಂತೆ. ಒಟ್ಟಿನಲ್ಲಿ ಸಾವಿನ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಲು ಮಾತ್ರವಲ್ಲ ಮೂರನೇ ಅಲೆಯಲ್ಲಿ ಕೊರೊನಾ ಸಾಮಾನ್ಯ ರೋಗದಂತೆ ಆಗಲು ವಾಕ್ಸಿನ್ ಕಾರಣ ಎಂದು ವರದಿ ಹೇಳುತ್ತಿದೆ. ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆಯು ದೇಶವೇ ನಿಟ್ಟುಸಿರುವ ಬಿಡುವ ಈ ವರದಿ ವರದಿ ನೀಡಿದೆ. ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಶೇ.60ರಷ್ಟು ಸಾವಿಗೆ ಕಾರಣರಾದರು ಕೊರೊನಾ ಲಸಿಕೆ ಪಡೆಯದವರು ಎಂದು ವರದಿ ಹೇಳಿದೆ. 

Related Video