News Hour: ಜಗದೀಶ್ ಶೆಟ್ಟರ್ ಆಯ್ತು.. ಬಿಜೆಪಿ ಲಿಸ್ಟ್‌ನಲ್ಲಿ ಇನ್ನೂ ಇರೋರು ಯಾರು?

ಬಿಜೆಪಿ ಪಕ್ಷ ಸೇರಲು ಉತ್ಸುಕವಾಗಿರುವ ಜನಾರ್ದನ್ ರೆಡ್ಡಿ..!
ರಾಜ್ಯದ ಕೆಲ ನಾಯಕರಿಂದಲೂ ರೆಡ್ಡಿ ಸೇರ್ಪಡೆಗೆ ಆಸಕ್ತಿ
ರೆಡ್ಡಿ ಸೇರ್ಪಡೆಗೆ ಮೋದಿ, ಅಮಿತ್ ಶಾ ಅಂತಿಮ ತೀರ್ಮಾನ

Share this Video
  • FB
  • Linkdin
  • Whatsapp

ಲೋಕಾಸಭಾ ಚುನಾವಣೆಗೂ ಮುನ್ನ ಆಪರೇಷನ್ ಕಮಲ ಶುರುವಾಗಿದ್ದು, ಈಗಾಗಲೇ ಜಗದೀಶ್‌ ಶೆಟ್ಟರ್‌(Jagdish Shettar) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದೀಗ ಜನಾರ್ದನ್ ರೆಡ್ಡಿ, ಲಕ್ಷ್ಮಣ್ ಸವದಿ(Laxman Savadi) ಮುಂದಿನ ನಡೆಯೇನು..? ಎಂಬ ಪ್ರಶ್ನೆ ಎಲ್ಲಾರನ್ನೂ ಕಾಡುತ್ತಿದೆ. ಬಿಜೆಪಿ(BJP) ಪಕ್ಷ ಸೇರಲು ಜನಾರ್ದನ್ ರೆಡ್ಡಿ ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದ ಕೆಲ ನಾಯಕರಿಂದಲೂ ರೆಡ್ಡಿ ಸೇರ್ಪಡೆಗೆ ಆಸಕ್ತಿ ತೋರುತ್ತಿದ್ದಾರೆ. ರೆಡ್ಡಿ ಸೇರ್ಪಡೆ ಬಗ್ಗೆ ಮೋದಿ, ಅಮಿತ್ ಶಾ ಅಂತಿಮ ತೀರ್ಮಾನ ಮಾಡಲಿದ್ದಾರೆ. ಇನ್ನೂ ಲಕ್ಷ್ಮಣ ಸವದಿ ಕಾಂಗ್ರೆಸ್‌ನಲ್ಲೇ ಮುಂದುವರೆಯಲು ನಿರ್ಧರಿಸಿದ್ದಾರೆ. ಸವದಿ ಕರೆದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್‌ ಬಿಡಲ್ಲ ಎಂದು ಸವದಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

Related Video