Congress-APP : ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಆಪ್ ಮಹಾ ಮೈತ್ರಿ..! ದೆಹಲಿಯಲ್ಲಿ ಮೈತ್ರಿ..ಪಂಜಾಬ್‌ನಲ್ಲಿ ಏನು..?
ದೆಹಲಿಯಲ್ಲಿ ಕಾಂಗ್ರೆಸ್- ಎಎಪಿ ಮಧ್ಯೆ ಮೈತ್ರಿ ಫೈನಲ್
ಗುಜರಾತ್ ಹರಿಯಾಣದಲ್ಲೂ ಕಾಂಗ್ರೆಸ್ ಜತೆ ಎಎಪಿ ಮೈತ್ರಿ
ಪಂಜಾಬ್‌ನ 13 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ ಎಂದ ಕೇಜ್ರಿವಾಲ್
ಉತ್ತರ ಪ್ರದೇಶ ಬಳಿಕ ದೆಹಲಿಯಲ್ಲಿ I.N.D.I.A ಮೈತ್ರಿ ಸಕ್ಸಸ್ ಆಗಿದೆ. ಲೋಕಸಭೆ(Loksabha)ಚುನಾವಣೆಯಲ್ಲಿ ಕಾಂಗ್ರೆಸ್-ಆಪ್ ಮಹಾ ಮೈತ್ರಿ ಮಾಡಿಕೊಂಡಿವೆ. ಪಂಜಾಬ್(Punjab) ಹೊರತುಪಡಿಸಿ ಉಳಿದೆಡೆ ಆಮ್ ಆದ್ಮಿ ಮೈತ್ರಿ(APP) ಮಾಡಿಕೊಂಡಿದೆ. ದೆಹಲಿಯ(Delhi) 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 3, ಎಎಪಿಗೆ 4 ಸ್ಥಾನ ಕೊಡಲಾಗಿದೆ. 2019ರ ಚುನಾವಣೆಯಲ್ಲಿ ದೆಹಲಿ 7 ಕ್ಷೇತ್ರಗಳಲ್ಲಿ ಬಿಜೆಪಿ(BJP) ಜಯ ಸಾಧಿಸಿತ್ತು. ಪಂಜಾಬ್‌ನಲ್ಲಿ ಮೈತ್ರಿ ಬಗ್ಗೆ ಇನ್ನೂ ಯಾವ ನಿರ್ಧಾರವೂ ಇಲ್ಲ. 3 ರಾಜ್ಯಗಳಲ್ಲಿ ಕಾಂಗ್ರೆಸ್(COngress)-ಆಮ್ ಆದ್ಮಿ ಪಾರ್ಟಿ ಮೈತ್ರಿ ಮಾಡಿಕೊಂಡಿದ್ದು, ಗುಜರಾತ್ 2, ಹರಿಯಾಣ 1 ಕ್ಷೇತ್ರಗಳಲ್ಲಿ ಆಪ್ ಸ್ಪರ್ಧೆ ಮಾಡಲಿದೆ. 2 ಪಕ್ಷಗಳ ಸೀಟ್ ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಇದೆ.
ಇದನ್ನೂ ವೀಕ್ಷಿಸಿ: ಅಶ್ವಿನಿ ಪುನೀತ್‌ಗೆ ರಾಜ್ಯಸಭೆ ಟಿಕೆಟ್ ನೀಡಲು ಮುಂದಾಗಿತ್ತಾ ಬಿಜೆಪಿ ? ನಾಯಕರ ಪ್ರಸ್ತಾಪ ತಿರಸ್ಕರಿಸಿದ್ರಾ ದೊಡ್ಮನೆ ಸೊಸೆ ?