ಬಿಂದ್ರನ್‌ವಾಲೆ ಅಂತ್ಯಕ್ಕೆ ಇಂದಿರಾ ಗಾಂಧಿ ರಚಿಸಿದ ವ್ಯೂಹವೇನು? ಸಿಖ್ಖರು, ಹಿಂದೂಗಳ ಮಧ್ಯೆ ವಿಷವರ್ತುಲ ಹುಟ್ಟಿಕೊಂಡಿದ್ದೇಕೆ ?
ಭಿಂದ್ರನ್‌ವಾಲೆ ದಮನಕ್ಕೆ ಜೈಲ್ ಸಿಂಗ್ ಒಪ್ಪಲಿಲ್ಲ. ಬಟ್, ಪಂಜಾಬಿನ ನೆಮ್ಮದಿ ಇರೋದೇ ಭಿಂದ್ರನ್‌ವಾಲೆಯ ಅಂತ್ಯದಲ್ಲಿ ಅನ್ನೋದು ಗೊತ್ತಿದ್ದ ಇಂದಿರಾ ಗಾಂಧಿ ಒಂದು ವ್ಯೂಹವನ್ನೇ ರಚಿಸಿದ್ರು.
ಏಷ್ಯನ್ ಗೇಮ್ಸ್ ಹೆಸರಲ್ಲಿ ದೆಹಲಿ ಮದುವಣಗಿತ್ತಿಯಂತೆ ಮೆರೆಯೋಕೆ ನೋಡ್ತಾ ಇದ್ರೆ, ಪಂಜಾಬಿನಿಂದ(Punjab) ಖಲಿಸ್ತಾನಿಗಳ ಬೆದರಿಕೆ ಶುರುವಾಯ್ತು. ಹಾಗಾಗಿನೇ, ಪಂಜಾಬ್‌ನಿಂದ ದೆಹಲಿಗೆ ಬರೋ ಪ್ರತಿ ವಾಹನವನ್ನೂ, ವ್ಯಕ್ತಿಯನ್ನೂ ತಪಾಸಣೆ ಮಾಡೋ ವ್ಯವಸ್ಥೆ ಮಾಡಿದ್ರು. ಆದ್ರೆ ಈ ಘಟನೆ, ಸಿಖ್ಖರನ್ನೇ(Sikhs) ಕೆರಳಿಸಿಬಿಡ್ತು. ಪಂಜಾಬಿನಲ್ಲಿ ಶುರುವಾದ ಈ ಆಕ್ರೋಶದ ಕಿಚ್ಚಲ್ಲಿ, ಕೈಬೆಚ್ಚಗೆ ಮಾಡ್ಕೊಳೋಕೆ ಪ್ಲ್ಯಾನ್ ಮಾಡ್ದ, ಭಿಂದ್ರನ್‌ವಾಲೆ(Bhindranwale). ನಮ್ಮ ನೆಲದಲ್ಲಿ ನಮ್ಮನ್ನೇ ಸೆಕಂಡ್ ಕ್ಲಾಸ್ ಸಿಟಿಜನ್ ಥರ ಟ್ರೀಟ್ ಮಾಡ್ತಾ ಇದಾರೆ. ಪ್ರಾಣ ಪಣಕ್ಕಿಟ್ಟು ಸೇವೆ ಮಾಡೋ ಸಿಖ್ ಸೈನಿಕರನ್ನೇ ಅವಮಾನಿಸ್ತಾ ಇದಾರೆ ಅಂತ ಯುವಕರನ್ನ ಪ್ರಚೋದಿಸೋಕೆ ಶುರುಮಾಡ್ದ. ಅವನ ಹಿಂದಿದ್ದ ಸೇನೆ ಅಲರ್ಟ್ ಆಯ್ತು. ಪರಿಣಾಮ-ರಕ್ತದೋಕುಳಿ ಶುರುವಾಯ್ತು. ಅದಕ್ಕೆ ಮೊದಲ ಬಲಿಯಾಗಿದ್ದು, ಅಂದಿನ ಡೆಪ್ಯೂಟಿ ಇನ್‌ಸ್ಪೆಕ್ಟರ್ ಜನರಲ್, ಅವತಾರ್.
ಇದನ್ನೂ ವೀಕ್ಷಿಸಿ: ಮೈಸೂರಿನಲ್ಲಿ ದಿಗ್ಗಜ ನಾಯಕರ ಮಹಾಸಂಗಮ: 8 ವರ್ಷಗಳ ಬಳಿಕ ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಿದ ಸಿದ್ದರಾಮಯ್ಯ