Asianet Suvarna News Asianet Suvarna News

ಕೊರೋನಾ ಜಾಗೃತಿ, ವೈರಲ್ ಆಯ್ತು ಚೆನ್ನೈ ರೈಲ್ವೇ ಪೊಲೀಸರ ಡಾನ್ಸ್!

ಕೇರಳ ಪೊಲೀಸರ ಬಳಿಕ ಇದೀಗ ಚೆನ್ನೈ ರೈಲ್ವೇ ಪೊಲೀಸರು ದೇಶದ ನಾಗರಿಕರು ಹಾಗೂ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಲ್ಲಿ ಕೊರೋನಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ಡಾನ್ಸ್ ಮೂಲಕ ಚೆನ್ನೈ ರೈಲ್ವೇ ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆ ಮಾಸ್ಕ್ ತಪ್ಪದೇ ಬಳಸುವ ಸಂದೇಶ ನೀಡಿದ್ದಾರೆ. 

ಚೆನ್ನೈ(ಮೇ.10): ಕೇರಳ ಪೊಲೀಸರ ಬಳಿಕ ಇದೀಗ ಚೆನ್ನೈ ರೈಲ್ವೇ ಪೊಲೀಸರು ದೇಶದ ನಾಗರಿಕರು ಹಾಗೂ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಲ್ಲಿ ಕೊರೋನಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ಡಾನ್ಸ್ ಮೂಲಕ ಚೆನ್ನೈ ರೈಲ್ವೇ ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆ ಮಾಸ್ಕ್ ತಪ್ಪದೇ ಬಳಸುವ ಸಂದೇಶ ನೀಡಿದ್ದಾರೆ. 

ಯಮುನಾ ನದಿಯಲ್ಲಿ ತೇಲಿ ಬಂತು ಸೋಂಕಿತರ ಅರೆಬೆಂದ ಮೃತದೇಹಗಳು

ಕಠಿಣ ಪರಿಸ್ಥಿತಿಯಲ್ಲೂ ಹೇಗೆ ಧೈರ್ಯದಿಂದ, ಖುಷಿ ಹಾಗೂ ತಾಳ್ಮೆಯಿಂದಿರಬೇಕೆಂದೂ ಈ ನೃತ್ಯದ ಮೂಲಕ ತಿಳಿಸಿದ್ದಾರೆ. ಯೂನಿಫಾರಂನಲ್ಲಿರುವ ಚೆನ್ನೈ ಸೆಂಟ್ರಲ್ ರೈಲ್ವೇ ಸ್ಟೇಷನ್‌ನ ಮಹಿಳಾ ಪೊಲೀಸರು ಸುರಕ್ಷತೆ ನಿಟ್ಟಿನಲ್ಲಿ ಕೈಗಳಿಗೆ ಗ್ಲೌಸ್‌ ಕೂಡಾ ಧರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿರುವ Enjoy Enjaami ಹಾಡಿಗೆ ಪೊಲೀಸರು ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಜನರ ಫೇವರಿಟ್‌ ಸಾಂಗ್‌ಗೆ ಮಾಡಿದ ಡಾನ್ಸ್‌ ಕೂಡಾ ಭಾರೀ ವೈರಲ್ ಆಗಿದೆ.