ನವ ಭಾರತದ ನೂತನ ಗುರುತು ಸೆಂಟ್ರಲ್ ವಿಸ್ತಾ: 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಕಟ್ಟಡ !
ಸೆಂಟ್ರಲ್ ವಿಸ್ತಾ ಲೋಕಾರ್ಪಣೆಯಾಗಿದ್ದು, 1200 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡವನ್ನು ಕಟ್ಟಲಾಗಿದೆ. 39.6 ಮೀಟರ್ ಎತ್ತರದಲ್ಲಿ ನಾಲ್ಕು ಅಂತಸ್ತಿನ ಹೊಸ ಸಂಸತ್ ಭವನ ನಿರ್ಮಾಣವಾಗಿದೆ.
ಸೆಂಟ್ರಲ್ ವಿಸ್ತಾ ಇದೀಗ ಲೋಕಾಪರ್ಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನವನ್ನ ಉದ್ಘಾಟಿಸಿದ್ದಾರೆ. ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ಅನೇಕ ವಿಶೇಷತೆಗಳು ಕಾಣ ಸಿಕ್ಕಿವೆ. ನವ ಭಾರತದ ನೂತನ ಗುರುತಾಗಿ ಸೆಂಟ್ರಲ್ ವಿಸ್ತಾ ಗುರುತಿಸಿಕೊಂಡಿದೆ.ಹೊಸ ಸಂಸತ್ತಿನ ಕಟ್ಟಡವು ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ಪ್ರತಿ ರಾಜ್ಯಗಳ ಘಮಲು ಇಡೀ ಸಂಸತ್ ಕಟ್ಟಡದಲ್ಲಿ ಕಾಣಸಿಗುತ್ತೆ. ನೂತನ ಸಂಸತ್ ಭವನ, ಭಾರತದ ಭವ್ಯ ಕಟ್ಟಡ. ಹೊಸ ತಂತ್ರಜ್ಞಾನ, ಹೊಸ ಶೈಲಿಯಿಂದ ನಿರ್ಮಾಣವಾಗಿರೋ ಮೋಸ್ಟ್ ಬ್ಯೂಟಿಫುಲ್ ಕನ್ಸ್ಟ್ರಕ್ಷನ್. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು. ಈಗ ಈ ನೂತನ ಭವನದ ಉದ್ಘಾಟನೆಯಾಗಿದೆ.ಪೂಜಾ ಕಾರ್ಯಗಳು, ಮಾರ್ದನಿಸಿದ ಮಂತ್ರಘೋಷ, ಸೇರಬೇಕಿದ್ದ ಜಾಗಕ್ಕೆ ಸೇರಿದ ಸೆಂಗೋಲ್ ಎಲ್ಲಾವೂ ಕೂಡ ಅದ್ಭುತ.
ಇದನ್ನೂ ವೀಕ್ಷಿಸಿ: Today Horoscope: ಸೋಮವಾರ ಯಾವ ರಾಶಿಗೆ ಲಾಭ, ನಷ್ಟ ?: ಇಂದು ದುರ್ಗಾದೇವಿಗೆ ಪ್ರಾರ್ಥನೆ ಸಲ್ಲಿಸಿ