Asianet Suvarna News Asianet Suvarna News

ಮಳೆ-ಪ್ರವಾಹದಿಂದ ಯಡಿಯೂರಪ್ಪ ಕುರ್ಚಿ ಸೇಫ್; ರಾಜೀನಾಮೆಗೆ ತಾತ್ಕಾಲಿಕ ಬ್ರೇಕ್?

Jul 25, 2021, 12:47 AM IST

ಬೆಂಗಳೂರು(ಜು.25): ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಉತ್ತರ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳು ಮುಳುಗಡೆಯಾಗಿದೆ. ಪ್ರವಾಹದಿಂದ ಮನೆಗಳು ಕೊಚ್ಚಿ ಹೋಗಿವೆ. ಭೂಕುಸಿತ ಸಂಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ರಾಜೀನಾಮೆ ಅಧ್ಯಾಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವ ಸಾಧ್ಯತೆ ಅನ್ನೋ ಮಾತುಗಳು ಕೇಳಿಬಂದಿದೆ. ನೆರೆ ಪರಿಸ್ಥಿತಿ ತಣ್ಣಗಾದ ಮೇಲೆ ರಾಜೀನಾಮೆ ಪ್ರಹಸನ ಆರಂಭವಾಗಲಿದೆ ಅನ್ನೋ ರಾಜಕೀಯ ಮಾತುಗಳು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಇನ್ನು ಕರ್ನಾಟಕ ನೆರೆ ಪರಿಸ್ಥಿತಿ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ