Asianet Suvarna News Asianet Suvarna News

ಕಾಂಗ್ರೆಸ್ ಪರ ಹೊರಬಿದ್ದ ಮತಗಟ್ಟೆ ಸಮೀಕ್ಷೆಗಳು..! ರಮಣ್ ಸಿಂಗ್ ನಾಯಕತ್ವ ಬಿಜೆಪಿಗೆ ಮುಳುವಾಯ್ತಾ?

ಬಿಜೆಪಿಗೆ ಅಧಿಕಾರಕ್ಕೇರುವ ಕನಸು ಕನಸಾಗಿಯೇ ಉಳಿತಾ..?
ಛತ್ತೀಸ್‌ಗಢದಲ್ಲಿ ನಿರಾಸೆ ಅನುಭವಿಸುತ್ತಾ ಕಮಲ..?
ರಮಣ್ ಸಿಂಗ್ ನಾಯಕತ್ವ ಬಿಜೆಪಿಗೆ ಮುಳುವಾಯ್ತಾ?

ಛತ್ತೀಸ್‌ಗಢ ರಾಜ್ಯಕ್ಕೆ India Today Axis My India ಸಮೀಕ್ಷೆಯಲ್ಲಿ ಕಾಂಗ್ರೆಸ್‌(Congress) 40 ರಿಂದ 50 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದರೆ, ಬಿಜೆಪಿ 36-46 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಇತರೆ 1 ರಿಂದ 5 ಸ್ಥಾನ ಗೆಲ್ಲಬಹುದು ಎಂದಿದೆ. ಇನ್ನು C Voter ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 41-53 ಸ್ಥಾನ ಗೆಲ್ಲಬಹುದು ಎಂದಿದ್ದರೆ, ಬಿಜೆಪಿ(BJP) 36-48 ಸ್ಥಾನ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಇತರೆ 0 ಯಿಂದ 4 ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ. ರಿಪಬ್ಲಿಕ್-ಮಾಟ್ರೀಜ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಪಕ್ಷ 44-52 ಸ್ಥಾನ, ಬಿಜೆಪಿ 34-42 ಸ್ಥಾನ ಹಾಗೂ ಇತರೆ 0 ಯಿಂದ 2 ಸ್ಥಾನ ಗೆಲ್ಲಬಹುದು ಎಂದಿದೆ. Times Now ETG ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 34-36 ಸೀಟ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಬಿಜೆಪಿ 26-30 ಸೀಟ್‌ಗಳಲ್ಲಿ ಹಾಗೂ ಇತರೇ 2-4 ಸೀಟ್‌ಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದಿದೆ. News 24-Chanakya ಪ್ರಕಾರ ಕಾಂಗ್ರೆದ್‌ 57 ಸೀಟ್‌ಗಳಲ್ಲಿ ಗೆಲ್ಲಲಿದ್ದರೆ, ಬಿಜೆಪಿ 33 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎಂದು ತಿಳಿಸಿದೆ.

ಇದನ್ನೂ ವೀಕ್ಷಿಸಿ:  ರಾಜಸ್ಥಾನದಲ್ಲಿ ಮತ್ತೆ ರೋಟೆಷನ್ ಪದ್ಧತಿ ಪಕ್ಕಾನಾ..? 1998ರಿಂದ ಪ್ರತಿ ಬಾರಿ ಅಧಿಕಾರ ಅದಲು- ಬದಲು!

Video Top Stories