ಮಧ್ಯಪ್ರದೇಶದಲ್ಲಿ ಚುನಾವಣೆ ಬಳಿಕ ಸಿಎಂ ಆಯ್ಕೆ.. ಶಾ ಕಟ್ಟಾಜ್ಞೆ..!
ಮಧ್ಯಪ್ರದೇಶದಲ್ಲಿ ಚುನಾವಣೆ ಬಳಿಕ ಶಿವರಾಜ್ ಸಿಂಗ್‌ಗೆ ಕೊಕ್?
ಹಾಲಿ ಮುಖ್ಯಮಂತ್ರಿಗೆ ಬಿಗ್ ಶಾಕ್ ನೀಡಿದ ಅಮಿತ್ ಶಾ ಮಾತು
ಚುನಾವಣೆ ಬಳಿಕ ಸಿಎಂ ಆಯ್ಕೆ ಎಂದ ಬಿಜೆಪಿ ಚಾಣಕ್ಯ ಶಾ
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯಿಂದ ಎಚ್ಚರಿಕೆಯ ನಡೆ ಇಡಲಾಗುತ್ತಿದೆ. ಕರ್ನಾಟಕದಲ್ಲಿ ಮಾಡಿದ ತಪ್ಪು ಮರುಕಳಿಸದಂತೆ ಬಿಜೆಪಿ ಪ್ಲ್ಯಾನ್ ಮಾಡುತ್ತಿದಿ. ಕರ್ನಾಟಕ ಸೋಲಿನಿಂದ ಬಿಜೆಪಿ(BJP) ನಾಯಕರು ಪಾಠ ಕಲಿತಂತೆ ಕಾಣುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ಮಧ್ಯಪ್ರದೇಶದಲ್ಲಿ(Madhya Pradesh) ಬಿಜೆಪಿ 2ನೇ ಪಟ್ಟಿ ಬಿಡುಗಡೆ ಮಾಡಿದೆ. 39 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಹೈಕಮಾಂಡ್ ಬಿಡುಗಡೆ ಮಾಡಿದೆ. ಇದುವರೆಗೂ 230 ಕ್ಷೇತ್ರಗಳ ಪೈಕಿ 78 ಕ್ಷೇತ್ರಕ್ಕೆ ಅಭ್ಯರ್ಥಿ ಫೈನಲ್ ಮಾಡಲಾಗಿದೆ. ಮೂವರು ಕೇಂದ್ರ ಸಚಿವರಿಗೂ ವಿಧಾನಸಭೆ ಟಿಕೆಟ್ (Assembly ticket) ನೀಡಲಾಗಿದೆ. ಜೊತೆಗೆ ಮೂವರು ಸಂಸದರಿಗೂ ವಿಧಾನಸಭೆ ಟಿಕೆಟ್ ಘೋಷಣೆ ಮಾಡಲಾಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಗೆಲುವೊಂದೇ ಬಿಜೆಪಿ ಮಾನದಂಡವಾಗಿದೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಿದೆ. ಹಿನ್ನಡೆಯಾಗುವ ಕ್ಷೇತ್ರದಲ್ಲಿ ಕೇಂದ್ರ ಸಚಿವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಮೂಲಕ ಬಹುಮತ ಸಾಧಿಸಲು ಹೈಕಮಾಂಡ್‌ನಿಂದ ರಣತಂತ್ರ ಮಾಡಲಾಗಿದೆ. ಸುಖಾಸುಮ್ಮನೆ ಟಿಕೆಟ್ ಬದಲಾಯಿಸಿ ಕರ್ನಾಟಕದಲ್ಲಿ ಹಿನ್ನಡೆಯನ್ನು ಬಿಜೆಪಿ ಅನುಭವಿಸಿತ್ತು. ಟಿಕೆಟ್ ಘೋಷಣೆಯಲ್ಲೂ ಭಾರೀ ವಿಳಂಬವನ್ನು ಮಾಡಿತ್ತು.
ಇದನ್ನೂ ವೀಕ್ಷಿಸಿ: ಬಿಜೆಪಿ-ಜೆಡಿಎಸ್ ಮೈತ್ರಿ.. ಅಡಕತ್ತರಿಯಲ್ಲಿ ಸಿಎಂ ಇಬ್ರಾಹಿಂ !