Asianet Suvarna News Asianet Suvarna News

ಅಲ್ಲೇ ಇಡ್ಲಿ ತಿಂದವನು ಅಲ್ಲೇ ಬಾಂಬೂ ಇಟ್ಟನಾ..? ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಆಗಿದ್ದು ಯಾಕೆ..?

ಸಿಸಿಟಿವಿ ದೃಶ್ಯದಲ್ಲಿತ್ತು ಎದೆನಡುಗಿಸೋ ಸಂಗತಿ..!
ನಿಗೂಢ ಸ್ಫೋಟದ ಹಿಂದೆ ನೂರೆಂಟು ಕತೆಗಳು..!
ಶುರುವಾಯ್ತು ಆತಂಕ,ಅಲರ್ಟ್ ಆಯ್ತು ಬೆಂಗಳೂರು!

ಹಾಡಹಗಲಲ್ಲೆ ನಡೆದು ಹೋಯ್ತು ರಾಜ್ಯ ರಾಜಧಾನಿಯಲ್ಲಿ ಭೀಕರ ಬ್ಲಾಸ್ಟ್. ಹಾಗಾದ್ರೆ ಮತ್ತೊಮ್ಮೆ ಟಾರ್ಗೆಟ್ ಆಯ್ತಾ ನೆಮ್ಮದಿಯಾಗಿದ್ದ ನಮ್ಮ ಬೆಂಗಳೂರು..? ಕ್ಷಣಕ್ಷಣಕ್ಕೂ ಹೊರಬೀಳುತ್ತಿವೆ ಭಯಾನಕ ನಿಗೂಢ ರಹಸ್ಯಗಳು. ಎಲ್ಲಾ ದಿನಗಳ ಹಾಗೆ ಬೆಂಗಳೂರು(Bengaluru) ಕೂಡ ನೆಮ್ಮದಿಯಾಗಿತ್ತು. ತಾನಾಯ್ತು. ತನ್ನ ಟ್ರಾಫಿಕ್ ಕಿರಿಕಿರಿಯಾಯ್ತು ಅಂತಿತ್ತು. ಆದ್ರೆ, ಶುಕ್ರವಾರ ಮಧ್ಯಾಹ್ನ ನಡೆದಿದ್ದೇ ಬೇರೆ. ಆ ಒಂದು ಘಟನೆ, ಬೆಂಗಳೂರಿನ ಚಿತ್ರಣವನ್ನೇ ಬುಡಮೇಲು ಮಾಡಿಬಿಡ್ತು. ಬೆಂಗಳೂರು ಮರೆತೇ ಹೋಗಿದ್ದ ಅತಿ ಭೀಕರ ಸ್ಫೋಟ(Blast). ಅಂಥದ್ದೊಂದು ಸ್ಫೋಟ ಸಂಭವಿಸಿದ್ದು, ಬೆಂಗಳೂರಿನ ಕುಂದಲಹಳ್ಳಿಯಲ್ಲಿರೋ ಶ್ರೀರಾಮೇಶ್ವರಂ ಕೆಫೆ(Rameswaram Cafe) ಅನ್ನೋ ಹೋಟೆಲ್ ಒಂದರಲ್ಲಿ. ಬೆಂಗಳೂರಿನ ಫೇಮಸ್ ಮೆಜಸ್ಟಿಕ್ ಬಸ್ ಸ್ಟಾಂಡ್ ಇದ್ಯಲ್ಲಾ, ಅದನ್ನ ಬೆಂಗಳೂರಿನ ಹೃದಯಭಾಗ ಅಂತ ಕನ್ಸಿಡರ್ ಮಾಡಿದ್ರೆ, ಅಲ್ಲಿಂದ ಸುಮಾರು 20-21 ಕಿಲೋಮೀಟರ್ ದೂರದಲ್ಲಿರೋ ಹೋಟೆಲ್ ಇದು.. ಇವತ್ತು, ಸ್ಫೋಟಕ್ಕೆ ತುತ್ತಾಗಿ, ಅಳಿದುಳಿದ ಅವಶೇಷದ ಹಾಗೆ ಕಾಣ್ತಾ ಇರೋ ಈ ಹೋಟೆಲ್, ಬೆಂಗಳೂರಿನ ಲ್ಯಾಂಡ್‌ ಡ್ಯಾಕುಮೆಂಟ್‌ಗಳ ಪೈಕಿ ಒಂದು.

ಇದನ್ನೂ ವೀಕ್ಷಿಸಿ:  Rameshwaram Cafe Blast: ಹ್ಯಾಂಡ್ ವಾಶ್‌ನ ಸಿಂಕ್ ಬಳಿ ಸ್ಫೋಟಕ ಇದ್ದ ಕಪ್ಪು ಬ್ಯಾಗ್: ಅಲ್ಲಿ ಬಾಂಬ್ ಇಟ್ಟವರು ಯಾರು..?

Video Top Stories