ಭದ್ರಕೋಟೆಯಲ್ಲಿ ಬಿಜೆಪಿ ಮಹಾಪ್ರಯೋಗ! ಯಾರ ಟಿಕೆಟ್..ಯಾರ ಪಾಲು..? ಏನು ಗುಟ್ಟು..?
ರಣತಂತ್ರ ಸಿದ್ಧಗೊಳಿಸೋ ಹೊತ್ತಲ್ಲಿ ಬಿಜೆಪಿ ವಿಚಿತ್ರ ತಂತ್ರ!
ಕಸಬ್ಗೆ ಮರಣದಂಡನೆ ಕೊಡಿಸಿದವರಿಗೆ ಟಿಕೆಟ್ ಕೊಟ್ಟ ಬಿಜೆಪಿ!
ರಣರಂಗ ಪ್ರವೇಶಕ್ಕೂ ಮುನ್ನ ನಿಕಮ್ ಹೇಳಿದ್ದೇನು ಗೊತ್ತಾ..?
ದೇಶ ವಿರೋಧಿಗಳ ವಿರುದ್ಧ ಹೋರಾಡಿದ್ದ ವಕೀಲರಿಗೆ ಚುನಾವಣ ರಣ ಪ್ರವೇಶಿಸೋಕೆ ಅವಕಾಶ ಕೊಟ್ಟಿದೆ ಕೇಸರಿ(BJP) ಪಾಳಯ. ಯುದ್ಧ ಆರಂಭವಾಗಿದೆ. ಗೆಲುವು ಯಾರಿಗೆ ಅನ್ನೋ ಅರ್ಧ ರಹಸ್ಯ ಸ್ಟ್ರಾಂಗ್ ರೂಮ್‌ನಲ್ಲಿ ಬೆಚ್ಚಗೆ ಕೂತಿದೆ. ಆದ್ರೆ, ಇಂಥಾ ಹೊತ್ತಲ್ಲಿ, ಯುದ್ಧ ತಂತ್ರ ಸಿದ್ಧಗೊಳಿಸಿ, ಎದುರಾಳಿಯನ್ನ ಎದುರಿಸೋ ಹೊತ್ತಲ್ಲಿ, ಕೇಸರಿ ಪಡೆ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಎರಡನೇ ಹಂತದ ಮತದಾನ ಮುಗಿದಿದೆ. ಮೂರನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಒಟ್ಟು 191 ಮತಕ್ಷೇತ್ರಗಳ ವೋಟುಗಳು, ಸ್ಟ್ರಾಂಗ್ ರೂಮ್‌ನಲ್ಲಿ(Strong Room) ಜೋಪಾನವಾಗಿದ್ದಾವೆ. ಆದ್ರೆ, ಬಿಜೆಪಿ ಮಾತ್ರ, ಈಗಲೂ ತನ್ನ ರಣತಂತ್ರ ಹೆಣೆಯೋದ್ರಲ್ಲೇ ಬ್ಯುಸಿಯಾಗಿದೆ. ಬಿಜೆಪಿ ರಣತಂತ್ರ ಹೆಣೆಯೋದ್ರಲ್ಲಿ ಎತ್ತಿದ ಕೈ. ಕಳೆದ ಚುನಾವಣೆಗಳನ್ನ ಗಮನಿಸಿ ನೋಡಿದ್ರೆ ಈ ಸಂಗತಿ ಸ್ಪಷ್ಟವಾಗಿ ಗೊತ್ತಾಗುತ್ತೆ. ಫಲಿತಾಂಶ ನೆಗೆಟಿವೋ, ಪಾಸಿಟಿವೋ ಅದ್ ಬೇರೆ ಪ್ರಶ್ನೆ. ಆದ್ರೆ ಪ್ರಯೋಗ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರೆ, ಅಚ್ಚರಿ ಮೂಡಿಸೋದಂತೂ ಖಚಿತ. ಅಂಥದ್ದೇ ಅಚ್ಚರಿಯ ನಿರ್ಣಯ ಕೈಗೆತ್ತಿಕೊಂಡಿದೆ, ಕೇಸರಿ ಪಾಳಯ.