5 States Election: ಯೋಗಿ ಪ್ರಚಾರದಲ್ಲಿ ಮುಜಫ್ಫರ್‌ನಗರ ಗಲಭೆ ಪ್ರತಿಧ್ವನಿ, ಗೋವಾದಲ್ಲಿ ಫೋಟೋ ಫಿನಿಶ್‌?

ಸಮಾಜವಾದಿ ಪಕ್ಷದ ಕೆಂಪು ಟೋಪಿಗಳಲ್ಲಿ ಅಯೋಧ್ಯೆಯಲ್ಲಿ ಗುಂಡಿಕ್ಕಿ ಕೊಂದ ಮತು ಮುಜಪ್ಫರ್‌ನಗರದ ಗಲಭೆಯಲ್ಲಿ (Muzaffarnagar Riot) ಮೃತಪಟ್ಟಕರ ಸೇವಕರ ರಕ್ತ ಅಡಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adithyanath) ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

First Published Feb 1, 2022, 5:17 PM IST | Last Updated Feb 1, 2022, 5:49 PM IST

ಲಕ್ನೋ (ಫೆ. 01): ಸಮಾಜವಾದಿ ಪಕ್ಷದ ಕೆಂಪು ಟೋಪಿಗಳಲ್ಲಿ ಅಯೋಧ್ಯೆಯಲ್ಲಿ ಗುಂಡಿಕ್ಕಿ ಕೊಂದ ಮತು ಮುಜಪ್ಫರ್‌ನಗರದ ಗಲಭೆಯಲ್ಲಿ (Muzaffarnagar Riot) ಮೃತಪಟ್ಟಕರ ಸೇವಕರ ರಕ್ತ ಅಡಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adithyanath) ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

5 States Election: ಉತ್ತರ ಪ್ರದೇಶಕ್ಕೆ ಮೋದಿ ಎಂಟ್ರಿ, ಬಿಜೆಪಿಗೆ ಗಜ ಬಲ

ಉತ್ತರಪ್ರದೇಶದಲ್ಲಿ (Uttar Pradesh) ಈ ಹಿಂದೆ ಆಡಳಿತ ನಡೆಸಿದ್ದ ಸಮಾಜವಾದಿ ಪಕ್ಷ ಹಜ್‌ ಭವನ ನಿರ್ಮಿಸಿ, ಅಯೋಧ್ಯೆ ಮೇಲೆ ದಾಳಿ ನಡೆಸಿದ ಉಗ್ರರ ರಕ್ಷಣೆ ಮಾಡಿದ್ದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾನಸ ಸರೋವರ ಭವನ ನಿರ್ಮಿಸಿತು. ಅಷ್ಟುಮಾತ್ರವಲ್ಲ ರಾಜ್ಯದ ರೈತರ ದೊಡ್ಡ ಪ್ರಮಾಣದ ಸಾಲ ಮನ್ನಾ ಮಾಡಿತು. ಇದೇ ಎರಡೂ ಸರ್ಕಾರಗಳ ನಡುವಿನ ವ್ಯತ್ಯಾಸ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್‌ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶವು ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಫೋಟೋ ಫಿನಿಷ್‌ ಆಗಲಿದೆ. ಗೋವಾದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಇದರಿಂದಾಗಿ ಬಿಜೆಪಿ 15-19 ಸ್ಥಾನಗಳನ್ನು ಗೆಲ್ಲಲಿದ್ದು, ಪ್ರತಿಪಕ್ಷ ಕಾಂಗ್ರೆಸ್‌ 14-18 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ತಿಳಿಸಿದೆ.