5 States Election: ಉತ್ತರ ಪ್ರದೇಶಕ್ಕೆ ಮೋದಿ ಎಂಟ್ರಿ, ಬಿಜೆಪಿಗೆ ಗಜ ಬಲ
ಉತ್ತರ ಪ್ರದೇಶ ಚುನಾವಣಾ (Uttar Pradesh) ಅಖಾಡದಲ್ಲಿ ಪ್ರಧಾನಿ ಮೋದಿ (PM Modi) ಇಂದು ಎಂಟ್ರಿ ಕೊಟ್ಟಿದ್ದಾರೆ. ಕೊರೊನಾ, ಒಮಿಕ್ರೋನ್ ಹಿನ್ನಲೆಯಲ್ಲಿ ರಾಜಕೀಯ ಸಮಾವೇಶಗಳಿಗೆ ನಿರ್ಬಂಧ ಇರುವ ಕಾರಣ ಮೋದಿ, ವರ್ಚುವಲ್ ರ್ಯಾಲಿ (Virtual Rally) ಮೂಲಕ ಪ್ರಚಾರ ನಡೆಸಲಿದ್ದಾರೆ.
ನವದೆಹಲಿ (ಜ. 31): ಉತ್ತರ ಪ್ರದೇಶ ಚುನಾವಣಾ (Uttar Pradesh) ಅಖಾಡದಲ್ಲಿ ಪ್ರಧಾನಿ ಮೋದಿ (PM Modi) ಇಂದು ಎಂಟ್ರಿ ಕೊಟ್ಟಿದ್ದಾರೆ. ಕೊರೊನಾ, ಒಮಿಕ್ರೋನ್ ಹಿನ್ನಲೆಯಲ್ಲಿ ರಾಜಕೀಯ ಸಮಾವೇಶಗಳಿಗೆ ನಿರ್ಬಂಧ ಇರುವ ಕಾರಣ ಮೋದಿ, ವರ್ಚುವಲ್ ರ್ಯಾಲಿ (Virtual Rally) ಮೂಲಕ ಪ್ರಚಾರ ನಡೆಸಲಿದ್ದಾರೆ.
5 States Election: ಮತ್ತೆ ಬಿಜೆಪಿ ಕೈವಶ ಆಗುತ್ತಾ ಹಿಂದೂ ಅಸ್ಮಿತೆ ಅಯೋಧ್ಯೆ.?
ಮೋದಿ ಭಾಷಣ 21 ವಿಧಾನಸಭಾ ಕ್ಷೇತ್ರಗಳ ಸುಮಾರು 10 ಲಕ್ಷ ಮತದಾರರನ್ನು ತಲುಪುವ ವ್ಯವಸ್ಥೆ ಮಾಡಲಾಗಿದೆ. ಗೌತಮ ಬುದ್ಧನಗರ, ಮುಜಾಫರ್‌ನಗರ, ಭಾಗ್‌ಪತ್, ಸಹರಾನ್ಪುರ ಜಿಲ್ಲಾ ವ್ಯಾಪ್ತಿಯನ್ನು ಗುರಿಯಾಗಿಸಿಕೊಂಡು ಮೋದಿ ಪ್ರಚಾರ ಮಾಡಲಿದ್ದಾರೆ.
ಉತ್ತರ ಪ್ರದೇಶ (Uttar Pradesh) ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಫೆ.10 ರಿಂದ ಮಾ.7ರ ಅವಧಿಯಲ್ಲಿ ಹಲವು ಹಂತಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮಾ.10 ರಂದು ಈ ಎಲ್ಲಾ 5 ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.