
Biporjoy Cyclone:ಗುಜರಾತ್‌ನಲ್ಲಿ ಬಿಪರ್‌ಜಾಯ್ ಅಬ್ಬರ: ಹೈ ಅಲರ್ಟ್ ಘೋಷಣೆ..ಮೂವರು ಬಲಿ
ಗುಜರಾತ್‌ನ ಸೌರಾಷ್ಟ್ರ-ಕಛ್ ವಲಯಕ್ಕೆ ಜೂನ್ 15 ರಂದು ಬಿಪರ್‌ಜಾಯ್ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗುಜರಾತ್ ಕರಾವಳಿಯಲ್ಲಿ ಬಿಪರ್‌ಜಾಯ್ ಅಬ್ಬರ ಜೋರಾಗಿದ್ದು, ಗಂಟೆಗೆ 150 ಕಿ.ಮೀ ಶರವೇಗದಲ್ಲಿ ಗಾಳಿ ಬೀಸುತ್ತಿದೆ. ಜೂನ್ 15ಕ್ಕೆ ಕಛ್‌ನ ಬಂದರಿಗೆ ಚಂಡಮಾರುತ ಅಪ್ಪಳಿಸಲಿದೆ. ಕಡಲ ತೀರದಿಂದ 7500 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ 3 ಜನ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಗುಜರಾತ್‌ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಸೌರಾಷ್ಟ್ರ-ಕಳ್ ಕರಾವಳಿಗಳ ಮಾಂಡವಿ-ಜಖಾವು ಬಂದರು ಸಮೀಪ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ ಜೂನ್ 14ರಂದಿಲೇ ರಾಜ್ಯದ ಎಲ್ಲ ಜಿಲ್ಲೆಗಳಿಗೆ ರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್‌ನಗರ್, ರಾಜ್ ಕೋಟ್, ಜುನಾಗಢ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಚಂಡಮಾರುತದ ಹಾವಳಿಗೆ ಒಳಗಾಗಲಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ರಣ್‌ಬೀರ್ ಹೆಣ್ಣುಬಾಕ ಎಂದ ಕಂಗನಾ: ಯಶ್ ರಾವಣ ಅಲ್ಲ, ರಾಮನ ಪಾತ್ರ ಮಾಡಲಿ..!