
ವೃದ್ಧನ ನೆಲಕ್ಕೆ ಬೀಳಿಸಿ ತುಳಿದಾಡಿದ ಬೀಡಾಡಿ ದನಗಳು
ಹಾರದ ಬಂಕಾ ಜಿಲ್ಲೆಯಲ್ಲಿ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಎರಡು ಬೀದಿ ದನಗಳೂ ದಾಳಿ ಮಾಡಿರುವ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ಬಿಹಾರದ ಬಂಕಾ ಜಿಲ್ಲೆಯಲ್ಲಿ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಎರಡು ಬೀದಿ ದನಗಳೂ ದಾಳಿ ಮಾಡಿರುವ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಬಂಕಾದ ಪುನಿಸಿಯಾ ಗ್ರಾಮದಲ್ಲಿ ನಡೆದಿದ್ದು, ಬರಹತ್ ನಿವಾಸಿ ವೃದ್ಧರೊಬ್ಬರು ಇಂಗ್ಲಿಷ್ ಟರ್ನ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಎರಡು ಬೀದಿ ದನಗಳು ಆತನನ್ನು ನೆಲಕ್ಕೆ ತಳ್ಳಿ ತುಳಿದಿದ್ದು, ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಇದರ ಜೊತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳು ಇಲ್ಲಿವೆ.