ಬಿಹಾರದಲ್ಲಿ ಗದ್ದುಗೆ.. NDA vs ಮಹಾಘಟಬಂಧನ್ ಫೈಟ್! ಬಿಹಾರ ಚುನಾವಣೆ ಬಗ್ಗೆ ಭವಿಷ್ಯ ನುಡಿದ ಮ್ಯಾಟ್ರಿಜ್ ಸಮೀಕ್ಷೆ

ಬಿಹಾರ ವಿಧಾನಸಭಾ ಚುನಾವಣೆ ಕುರಿತು ಮ್ಯಾಟ್ರಿಜ್ ನಡೆಸಿದ ಸಮೀಕ್ಷೆಯಲ್ಲಿ, ಎನ್‌ಡಿಎ ಮೈತ್ರಿಕೂಟವು 150-160 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ಸಾಧ್ಯತೆಯಿದೆ. ಇಂಡಿಯಾ ಒಕ್ಕೂಟವು 75-85 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

Share this Video
  • FB
  • Linkdin
  • Whatsapp

ನವದೆಹಲಿ (ಅ.10): ಬಿಹಾರ ವಿಧಾನಸಭಾ ಚುನಾವಣೆಯ ಘೋಷಣೆಯ ನಂತರದ ರಾಜಕೀಯ ಪರಿಸ್ಥಿತಿ ಕುರಿತು ಮ್ಯಾಟ್ರಿಜ್ (Matrize) ನಡೆಸಿದ ಸಮೀಕ್ಷೆಯು ಮಹತ್ವದ ಫಲಿತಾಂಶಗಳನ್ನು ಹೊರಹಾಕಿದೆ. ಸಮೀಕ್ಷೆಯ ಪ್ರಕಾರ, ಎನ್‌ಡಿಎ (NDA) ಮೈತ್ರಿಕೂಟವು ಸ್ಪಷ್ಟ ಬಹುಮತ ಗಳಿಸಿ, ಮಹಾರಾಷ್ಟ್ರ ಮಾದರಿಯಲ್ಲಿ ಅಧಿಕಾರಕ್ಕೆ ಮರಳುವ ಸಾಧ್ಯತೆ ಇದೆ.

ಬಹುಮತಕ್ಕೆ 122 ಸೀಟ್‌ಗಳ ಅಗತ್ಯ ಇದ್ದು, 243 ವಿಧಾನಸಭಾ ಕ್ಷೇತ್ರ ಇರುವ ಬಿಹಾರದಲ್ಲಿ ಎನ್‌ಡಿಎ 150 ರಿಂದ 160 ಸೀಟ್‌ಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ. ಇಂಡಿಯಾ ಒಕ್ಕೂಟ 75-85 ಸೀಟ್‌ ಗೆಲ್ಲುವ ಸಾಧ್ಯತೆ ಇದ್ದರೆ, ಸ್ವತಂತ್ರ ಅಭ್ಯರ್ಥಿಗಳು 15-25 ಸೀಟ್‌ ಗೆಲ್ಲುವ ಸಾಧ್ಯತೆ ಇದೆ.

ಇನ್ನು ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 80-85 ಸೀಟ್‌ ಗೆಲ್ಲುವ ಸಾಧ್ಯತೆ ಇದ್ದರೆ, ನಿತೀಶ್‌ ಕುಮಾರ್‌ ಅವರ ಜೆಡಿಯು 60-65 ಸೀಟ್‌ ಗೆಲ್ಲಬಹುದು. ಎಲ್‌ಜೆಪಿ 4-6 ಸೀಟ್‌ ಗೆಲ್ಲಲಿದ್ದರೆ, ಎಚ್‌ಎಎಂ 3-6, ಆರ್‌ಎಲ್‌ಎಂ 1-2 ಸೀಟ್‌ ಗೆಲ್ಲಬಹುದು ಎಂದು ಅಂದಾಜು ನುಡಿದಿದೆ.

Related Video