
ಬಿಹಾರ ಯುದ್ಧಗೆಲ್ಲಲು ಬಿಜೆಪಿ ಹೊಸ ಪ್ರಯೋಗ: ಕೇಸರಿ ಪಡೆಯ ಬತ್ತಳಿಕೆಯಲ್ಲಿ ಈಗ ಸೀತಾಸ್ತ್ರ!
ಇಡೀ ದೇಶದ ಗಮನ ಇರೋದು ಬಿಹಾರದ ಕಡೆ. ಅಲ್ಲಿ ಅದೆಂಥಾ ಮತಸಂಗ್ರಾಮಕ್ಕೆ ವೇದಿಕೆ ಸಜ್ಜಾಗ್ತಾ ಇದೆ ಅಂದ್ರೆ, ಅಲ್ಲಿನ ಸೋಲು ಗೆಲುವು, ಬರೀ ಆ ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ.
ರಾಜಕಾರಣದಲ್ಲಿ ಒಂದು ಮಾತಿದೆ.. ಜನ ವೋಟ್ ಮಾಡೋದು ಜಾತಿ ನೋಡಿ, ಹೊರತು ಕೆಲಸ ನೋಡಿ ಅಲ್ಲ ಅಂತ.. ಈ ಮಾತು ದೇಶದ ಹಲವು ಭಾಗಗಳಲ್ಲಿ ನಿಜ ಇರಬಹುದು, ಅಥವಾ ಸುಳ್ಳೂ ಇರಬಹುದು. ಆದರೆ ಬಿಹಾರದಲ್ಲಿ ಈ ಮಾತು ಸತ್ಯ ಅಂತ ಪದೇ ಪದೇ ಪ್ರೂ ಆಗ್ತಲೇ ಬಂದಿದೆ ಅನ್ನೋ ವಾತಾವರಣ ಇದೆ. ಅಲ್ಲಿ ಅಧಿಕಾರಕ್ಕೆ ಬರೋಕೆ ಜಾತಿ ಲೆಕ್ಕಾಚಾರ. ಸಮುದಾಯದ ರಾಜಕಾರಣ. ಪ್ರತಿ ಚುನಾವಣೆಲೂ ಈ ಎರಡು ಅಂಶಗಳೇ ಅಲ್ಲಿ ಪ್ರಮುಖ ವಿಷಯಗಳು. ಆದ್ರೆ ಈ ಸಲ ಮತ್ತೂ ಒಂದು ಸಂಗತಿ ಸೇರ್ಪಡೆಯಾಗಿದೆ. ಅದರ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ.
ಇಡೀ ದೇಶದ ಗಮನ ಇರೋದು ಬಿಹಾರದ ಕಡೆ. ಅಲ್ಲಿ ಅದೆಂಥಾ ಮತಸಂಗ್ರಾಮಕ್ಕೆ ವೇದಿಕೆ ಸಜ್ಜಾಗ್ತಾ ಇದೆ ಅಂದ್ರೆ, ಅಲ್ಲಿನ ಸೋಲು ಗೆಲುವು, ಬರೀ ಆ ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ. ಅಲ್ಲಿ ಯಾವ ಪಕ್ಷ ಗೆದ್ದರೂ, ಯಾವ ಪಕ್ಷವೇ ಸೋತರೂ, ಅದರ ಪರಿಣಾಮ, ಅನ್ಯ ರಾಜ್ಯಗಳ ಮೇಲೂ ಉಂಟಾಗಲಿದೆ. ರಾಷ್ಟ್ರ ರಾಜಕಾರಣದ ಮೇಲೂ ಪ್ರಭಾವ ಬೀರಲಿದೆ..ಅಲ್ಲೆಲ್ಲೋ ಸಮುದ್ರದ ಗರ್ಭದಲ್ಲಿ ಭೂಮಿ ಕಂಪಿಸಿದರೆ, ಮತ್ತೆಲ್ಲೋ ಸುನಾಮಿ ಎದ್ದು ಪ್ರಚಂಡ ಪ್ರವಾಹ ಏಳುತ್ತಲ್ಲಾ, ಸೇಮ್ ಅದೇ ಥರ. ಹಾಗಾಗಿನೇ, ಬಿಹಾರದಲ್ಲಿ ಗೆದ್ದು ವೀರವಿಹಾರ ಮಾಡೋಕೆ ಯಾವ ಪಕ್ಷ ಏನೇನೆಲ್ಲಾ ಸಿದ್ಧತೆ ನಡೆಸಿದೆ ಅನ್ನೋದರ ಫುಲ್ ಡೀಟೇಲ್ಸ್, ಇಲ್ಲಿದೆ ನೋಡಿ.
ಬಿಹಾರದ ಗೆಲುವು ಕೇಸರಿ ಪಾಳಯದ ಪಾಲಿಗೆ ಅಗ್ನಿಪರೀಕ್ಷೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಅದು ಬರೀ ಒಂದು ರಾಜ್ಯದ ವಿಧಾನಸಭಾ ಗೆಲುವು ಮಾತ್ರವೇ ಅಲ್ಲ. ಅದಕ್ಕಿಂತಾ ಮುಖ್ಯವಾಗಿ, ಮೈತ್ರಿಯ ಅಗ್ನಿಪರೀಕ್ಷೆ. ಎನ್ಡಿಎ ಪಡೆಯ ಮೈತ್ರಿಯ ಸತ್ವ ಪರೀಕ್ಷೆ ನಡೀತಿದೆ ಬಿಹಾರದಲ್ಲಿ. ಮೋದಿ ಮ್ಯಾಜಿಕ್ ವರ್ಕ್ ಆಗುತ್ತಾ ಇಲ್ವಾ ಅನ್ನೋದಕ್ಕಿಂತಾ ಮುಖ್ಯವಾಗಿ, ನಿತೀಶ್ ಬಾಬು ನಿರ್ಣಯ ಫಲ ಕೊಡುತ್ತಾ ಇಲ್ವಾ ಅನ್ನೋದರ ಫೈನಲ್ ಟೆಸ್ಟ್ ಇದು. ಹಾಗಾದರೆ, ನಿಜಕ್ಕೂ ಸೀತಾ ಮಾತೆಯ ಕೃಪೆ ಮಂದಿರ ಕಟ್ಟೋಕೆ ಹೊರಟಿರೋ ಪಕ್ಷದ ಮೇಲೆ ಉಂಟಾಗುತ್ತಾ? ಕೇಸರಿ ಪಾಳಯಕ್ಕೆ ವಿಜಯ ದಕ್ಕುತ್ತಾ? ಹಲವಾರು ದಿನಗಳಿಂದಲೂ ಕುತೂಹಲ ಮೂಡಿಸಿರೋ ವಿಷಯ ಅಂದ್ರೆ, ಅದು ಬಿಹಾರದ ಚುನಾವಣೆ. ಅಲ್ಲಿನ ಗೆಲುವು, ರಾಷ್ಟ್ರ ರಾಜಕಾರಣದ ಮೇಲೆ ನಿಚ್ಚಳವಾಗಿ ತನ್ನ ಪರಿಣಾಮ ಬೀರಲಿದೆ.