Asianet Suvarna News Asianet Suvarna News

ಕ್ಷಣಮಾತ್ರದಲ್ಲಿ ಕೋಟಿ ಮೌಲ್ಯದ ಸೇತುವೆ ಪುಡಿ-ಪುಡಿ: ಬಿದ್ದಿದ್ದಲ್ಲ ನಾವೇ ಬೀಳಿಸಿದ್ದು ಎಂದ ಬಿಹಾರ್ ಡಿಸಿಎಂ..!

ಗಂಗಾ ನದಿಯಲ್ಲಿ ಸಮಾಧಿಯಾದ ಖಗೇರಿಯಾ ಸೇತುವೆ..!
14 ತಿಂಗಳಲ್ಲಿ ಎರಡು ಬಾರಿ ಕುಸಿದ ಬಿಹಾರ್ನ ಸೇತುವೆ..!
ಬಿಹಾರ್ ಸರ್ಕಾರದ ನಿರ್ಧಾರಕ್ಕೆ ಜನ ಫುಲ್ ಗರಂ..!

ಒಡಿಶಾ ರೈಲು ದುರಂತ ಕಣ್ಮುಂದಿರುವಾಗಲೇ  ಬಿಹಾರದಲ್ಲಿ ಮತ್ತೊಂದು ಮಹಾದುರಂತ ನಡೆದು ಹೋಗಿದೆ. ಸುಮಾರು 1,700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ಸೆಕೆಂಡ್ನಲ್ಲಿ ಗಂಗೆಯಲ್ಲಿ ಮುಳುಗಿ ಹೋಗಿದೆ. 2 ವರ್ಷದಲ್ಲಿ 2ನೇ ಬಾರಿ ಸಹಸ್ರಾರು ಮೌಲ್ಯದ ಸೇತುವೆ ಪುಡಿಪುಡಿಯಾಗಿದೆ. ಹರಿಯುವ ನೀರ ಮಧ್ಯದಲ್ಲಿ ಸೇತುವೆ ನಿರ್ಮಾಣ ಮಾಡೋದು, ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಗಂಗಾ ನದಿಯಲ್ಲಿ ಸೇತುವೆ ಕಟ್ಟೊದು ದೊಡ್ಡ ಸವಾಲೇ ಸರಿ.ಈ ಹಿಂದೆಯೂ ಇದೇ ಗಂಗೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಕೆಲ ಸೇತುವೆಗಳು ನೋಡ ನೋಡುತ್ತಲೇ ಮಂಗ ಮಾಯವಾಗಿದ್ದವು.ಭಾರತದಲ್ಲಿ ಈ ಹಿಂದೆಯೂ ಕೆಲ ಸೇತುವೆ ದುರಂತಗಳು ಸಂಭವಿಸಿದೆ. ಅದರಲ್ಲೂ ಡಾರ್ಜಿಲಿಂಗ್ನಲ್ಲಿ ನಡೆದ ಸೇತುವೆ ದುರಂತ ಇಡೀ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ: ದಿನ ಭವಿಷ್ಯ: ಇಂದು ಅಮ್ಮನವರ ಪ್ರಾರ್ಥನೆ ಮಾಡಿ, ನಿಮ್ಮ ಮನಸ್ಸಿನ ದುಗುಡಗಳು ನಿವಾರಣೆಯಾಗಲಿವೆ...

Video Top Stories