ದಿನ ಭವಿಷ್ಯ: ಇಂದು ಅಮ್ಮನವರ ಪ್ರಾರ್ಥನೆ ಮಾಡಿ, ನಿಮ್ಮ ಮನಸ್ಸಿನ ದುಗುಡಗಳು ನಿವಾರಣೆಯಾಗಲಿವೆ...

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತೃತೀಯ ತಿಥಿ, ಪೂರ್ವಾಷಾಢ ನಕ್ಷತ್ರ.

ತೃತೀಯ ತಿಥಿಯನ್ನು ಗೌರಿ ತಿಥಿ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸಾಧ್ಯವಾದ್ರೆ ಮಂಗಳಗೌರಿ ಪ್ರಾರ್ಥನೆ ಮಾಡಿ. ಆಕೆಗೆ ಕೆಂಪು ಹೂಗಳನ್ನು ಸಮರ್ಪಣೆ ಮಾಡಿ, ಅಕ್ಕಿ ಕಡಲೆಬೇಳೆ ಪಾಯಸ ಮಾಡಿ. ಇದು ಅಮ್ಮನವರಿಗೆ ತುಂಬಾ ಪ್ರಿಯವಾದ ಪಾಯಸವಾಗಿದೆ. ಅಮ್ಮನವರನ್ನು ಪೂಜಿಸುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ದೊರೆಯಲಿದೆ. ಬಿಳುಪಾದ ಹೂಗಳಿಂದ ಆಕೆಯನ್ನು ಪೂಜಿಸಿ, ತಾಯಿ ಮಕ್ಕಳನ್ನು ಪೋಷಿಸುವಂತೆ ಆಕೆ ನಮ್ಮನ್ನು ಪೋಷಿಸುತ್ತಾಳೆ.

ಇದನ್ನೂ ವೀಕ್ಷಿಸಿ: ರಸ್ತೆಯಲ್ಲಿ ಮನಬಂದಂತೆ ಪುಂಡರ ವ್ಹೀಲಿಂಗ್: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

Related Video