Turning Point: ಭಿಂದ್ರನ್ ವಾಲೆ ಯಾರು? ಇಂದಿರಾ ಗಾಂಧಿ ಆತನ ಬಗ್ಗೆ ಆಸಕ್ತಿ ತೋರಿಸದ್ದು ಯಾಕೆ?
ಕರ್ತಾರ್ ಸಿಂಗ್ ಖಾಲ್ಸಾ ಅನ್ನೋರು ಭಿಂದ್ರನ್‌ವಾಲೆ ಗುರುಗಳು. ಆದ್ರೆ 1977ರ ಆಗಸ್ಟ್ 16ನೇ ತಾರೀಖು, ಒಂದು ರೋಡ್ ಆ್ಯಕ್ಸಿಡೆಂಟ್ನಲ್ಲಿ ಅವರು ಮೃತರಾಗ್ತಾರೆ.
1977 ಇಂದಿರಾ ಗಾಂಧಿ ರಾಜಕೀಯ ಬದುಕಲ್ಲಿ ಅತಿದಾರುಣ ವರ್ಷ. ಗರೀಬಿ ಹಠಾವೋ ಅಂತ ಹೊರಟಿದ್ದ ಇಂದಿರಾ ಗಾಂಧಿ(Indira gandhi), ಎಮರ್ಜನ್ಸಿ ಹೇರಿ ವಿಲನ್ ಅನ್ನಿಸಿಕೊಂಡಿದ್ರು. ವಿಪಕ್ಷಗಳೆಲ್ಲಾ ಇಂದಿರಾ ಹಠಾವೋ ಅಂತ ರೊಚ್ಚಿಗೆದ್ದಿದ್ರು. ಜನಮತ ಕೂಡ ಇಂದಿರಾ ವಿರುದ್ಧವೇ ಇತ್ತು. ಎಷ್ಟರ ಮಟ್ಟಿಗೆ ಅಂದ್ರೆ, 1977ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತ್ತು ಕಾಂಗ್ರೆಸ್. ಕರ್ತಾರ್ ಸಿಂಗ್ ಖಾಲ್ಸಾ(kartar singh khalsa) ಅನ್ನೋರು ಭಿಂದ್ರನ್‌ವಾಲೆ(Bhindranwale) ಗುರುಗಳು. ದಮ್ದಮಿ ತಕ್ಸಲ್ನ ಜತೇದಾರ್ ಆಗಿದ್ದೋರು. ಆದ್ರೆ 1977ರ ಆಗಸ್ಟ್ 16ನೇ ತಾರೀಖು, ಒಂದು ರೋಡ್ ಆ್ಯಕ್ಸಿಡೆಂಟ್ನಲ್ಲಿ ಅವರು ಮೃತರಾಗ್ತಾರೆ. ಆಗ ಖಾಲಿ ಉಳಿದ ಜಾಗಕ್ಕೆ 31 ವರ್ಷದ ಭಿಂದ್ರನ್ವಾಲೆ ಆಯ್ಕೆಯಾಗ್ತಾನೆ. ಇವನ ಅಗ್ರೆಸಿವ್ ಮಾತುಗಳು, ಕ್ರಾಂತಿಕಾರಿ ಆಲೋಚನೆಗಳು ಯುವಕರನ್ನ ಆಕರ್ಷಿಸಿತ್ತು. ಮನೆಮಾರು ಬಿಟ್ಟು, ಸಂತನ ಹಾಗೆ, ಊರೂರು ಸುತ್ತುತ್ತಾ ಇರೋ ತುಂಬು ಯುವಕ, ಇದ್ದಕ್ಕಿದ್ದ ಹಾಗೇ ಪಂಜಾಬಿನ ಹಲವು ಸಿಖ್ಖರಿಗೆ ಹೀರೋ ಆಗ್ಬಿಟ್ಟ. ಇಷ್ಟು ಸಾಕಾಗಿತ್ತು, ರಾಜಕಾರಣಿಗಳು ಇವನ ಬೆನ್ನಿಗೆ ಬೀಳೋಕೆ.
ಇದನ್ನೂ ವೀಕ್ಷಿಸಿ: Crime News: ಕರ್ನಾಟಕದಲ್ಲೂ ಶುರುವಾಯಿತಾ ಹೊಡಿಬಡಿ ಪಾಲಿಟಿಕ್ಸ್..! ಬೆಂಗಳೂರು ಗ್ರಾಮಾಂತರದಲ್ಲಿ ಟಾರ್ಗೆಟ್ ಅಟ್ಯಾಕ್..!