I.N.D.I.A Alliance: ಬಿಹಾರದಲ್ಲಿ ನಿತೀಶ್ ಸಿಟ್ಟು.. ಪಂಜಾಬ್‌, ದೆಹಲಿಯಲ್ಲಿ ಕೇಜ್ರಿವಾಲ್ ಕ್ರೋಧ..!

I.N.D.I.A ಮಹಾ ಮೈತ್ರಿಕೂಟಕ್ಕೆ ಬಂಗಾಳದ ದೀದಿ ಚೆಕ್‌ಬಂದಿ..!
ಕಾಂಗ್ರೆಸ್ ವಿರುದ್ಧ ಮಿತ್ರರ ಬಂಡಾಯ.. ಘಟಬಂಧನ್ ಛಿದ್ರ ಛಿದ್ರ..?
I.N.D.I.A ಮೈತ್ರಿಕೂಟದಲ್ಲಿ ಭಿನ್ನಮತದ ಬಿರುಗಾಳಿ ಬೀಸಿದ್ದೇಕೆ..?

First Published Jan 25, 2024, 4:32 PM IST | Last Updated Jan 25, 2024, 4:32 PM IST

ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಿ, ಹಿಂದೂ ಸಮುದಾಯದ 500 ವರ್ಷಗಳ ಕನಸನ್ನು ನನಸಾಗಿಸಿ, ರಾಮಭಕ್ತರ ತಪಸ್ಸನ್ನು ಈಡೇರಿಸಿ, ರಾಮಾಸ್ತ್ರ ಹಿಡಿದು ಮಹಾಭಾರತ ಯುದ್ಧಕ್ಕೆ ಸಜ್ಜಾಗಿ ನಿಂತಿದ್ದಾರೆ ಪ್ರಧಾನಿ ನರೇಂದ್ರ ಮೋದಿ(Narendra modi). ಸಿಂಗಲ್ ಸಿಂಹ ಮೋದಿ ಬೇಟೆಗೆ ಹೊಂಚು ಹಾಕಿ ಕೂತಿದೆ 27 ಸೈನ್ಯಗಳ ಮಹಾಘಟಬಂಧನ್ ಮೈತ್ರಿಕೂಟ(Alliance). ಸಿಂಹವನ್ನು ಸಿಂಗಲ್ಲಾಗಿ ಬೇಟೆಯಾಡೋದು ಕಷ್ಟ ಅನ್ನೋ ಕಟು ಸತ್ಯವನ್ನು ಅರಿತಿರೋ ವಿರೋಧ ಪಕ್ಷಗಳು, ಮಹಾ ಮೈತ್ರಿಕೂಟವೊಂದನ್ನು ರಚಿಸಿ, ಅದಕ್ಕೆ ಇಂಡಿಯಾ ಅನ್ನೋ ಹೆಸರಿಟ್ಟು ರಣರಂಗಕ್ಕೆ ಧುಮುಕಿರೋದು ಹಳೇ ಸುದ್ದಿ. ಮೋದಿ ಅನ್ನೋ ಮದ್ದಾನೆಯನ್ನು ಕಟ್ಟಿ ಹಾಕಲು ಅಂಥದ್ದೇ ಬಲವನ್ನು ಒಗ್ಗೂಡಿಸಿ, ಆ ಬಲಕ್ಕೆ ಇಂಡಿಯಾ ಮೈತ್ರಿಕೂಟ ಅನ್ನೋ ಹೆಸರಿಡಲಾಗಿತ್ತು. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣದ ನಾಯಕರೆಲ್ಲಾ ಇಂಡಿಯಾ ಘಟಬಂಧನ್ ಜೊತೆ ಕೈ ಜೋಡಿಸಿದ್ದರು. ಕಾಂಗ್ರೆಸ್(COngress) ಪಕ್ಷದ ಜೊತೆ ಬಂಗಾಳದ ಮಮತಾ ಬ್ಯಾನರ್ಜಿ(Mamata Banerjee), ಬಿಹಾರದ ನಿತೀಶ್ ಕುಮಾರ್, ದೆಹಲಿಯ ಅರವಿಂದ್ ಕೇಜ್ರಿವಾಲ್, ಮಹಾರಾಷ್ಟ್ರದ ಶರದ್ ಪವಾರ್, ತಮಿಳುನಾಡಿನ ಎಂ.ಕೆ ಸ್ಟಾಲಿನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್.. ಮಹಾಘಟ ಬಂಧನ್ ಜೊತೆ ಹೆಜ್ಜೆ ಹಾಕಿದವರು ಒಬ್ಬರಿಗಿಂತ ಒಬ್ರು ಘಟಾನುಘಟಿಗಳೇ. ಎಲ್ಲರೂ ಒಂದಾಗಿ ಮೋದಿ ವಿರುದ್ಧ ರಣಕಹಳೆ ಮೊಳಗಿಸಿ ಬಿಟ್ಟಿದ್ರು.

ಇದನ್ನೂ ವೀಕ್ಷಿಸಿ:  1000 ವರ್ಷಗಳ ಬಳಿಕವೂ ಜನವರಿ 22,2024ನ್ನು ಎಲ್ಲರೂ ನೆನಪಿಸುತ್ತಾರೆ: ಪ್ರಧಾನಿ ಮೋದಿ

Video Top Stories