Asianet Suvarna News Asianet Suvarna News

PFI raids by NIA, ED: ಬೆಂಗಳೂರಲ್ಲಿ ಮತ್ತೊಮ್ಮೆ ಬೆಂಕಿ ಹಚ್ಚಲು ಸಂಚು? ಬ್ಯಾನ್ ಆಗುತ್ತಾ ಪಿಎಫ್‌ಐ?

NIA Raids on PFI: ಬೆಂಗಳೂರಲ್ಲಿ ಮತ್ತೊಮ್ಮೆ ಬೆಂಕಿ ಹಚ್ಚಲು ನಡೆದಿತ್ತಾ ಸಂಚು? ಪಿಎಫ್‌ಐ, ಎಸ್‌ಡಿಪಿಐ ನಿಷೇಧಕ್ಕೆ ಕೂಡಿ ಬಂತಾ ಕಾಲ? 

ನವದೆಹಲಿ (ಸೆ. 23): ಭಯೋತ್ಪಾದನೆಗೆ ಕುಮ್ಮಕ್ಕು, ದೇಶವಿರೋಧಿ ಚಟುವಟಿಕೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ವಿವಾದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (Popular Front of India) ಸಂಘಟನೆಗೆ ರಾಷ್ಟ್ರೀಯ ತನಿಖಾ ದಳ (NIA) ಶಾಕ್‌ ನೀಡಿದೆ. ಜಾರಿ ನಿರ್ದೇಶನಾಲಯ (Enforcement Directorate) ಮತ್ತು ರಾಜ್ಯ ಪೊಲೀಸರ ಸಹಯೋಗದೊಂದಿಗೆ 15 ರಾಜ್ಯಗಳ 93 ಸ್ಥಳಗಳಲ್ಲಿ ಪಿಎಫ್‌ಐ ಕಚೇರಿಗಳು ಹಾಗೂ ಕಾರ್ಯಕರ್ತರ ನಿವಾಸದ ಮೇಲೆ  ಎನ್‌ಐಎ ಏಕಕಾಲಕ್ಕೆ ನಡೆಸಿದ ದಾಳಿಯಲ್ಲಿ 110ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಇದು ಎನ್‌ಐಎ ನಡೆಸಿದ ‘ಈವರೆಗಿನ ಅತಿದೊಡ್ಡ ಭಯೋತ್ಪಾದನೆ ವಿರೋಧಿ ದಾಳಿ’ ಎನ್ನಿಸಿಕೊಂಡಿದೆ. 2047ಕ್ಕೆ ಇಸ್ಲಾಮಿಕ್ ಇಂಡಿಯಾ ಸಂಚು ಎನ್‌ಐಎ ದಾಳಿಗೆ ಕಾರಣವಾ ? ಬೆಂಗಳೂರಲ್ಲಿ ಮತ್ತೊಮ್ಮೆ ಬೆಂಕಿ ಹಚ್ಚಲು ನಡೆದಿತ್ತಾ ಸಂಚು? ಪಿಎಫ್‌ಐ, ಎಸ್‌ಡಿಪಿಐ ನಿಷೇಧಕ್ಕೆ ಕೂಡಿ ಬಂತಾ ಕಾಲ? ಈ ಕುರಿತ ಏಷ್ಯಾನೆಟ್‌ ಸುವರ್ಣ ನ್ಯೂಸ್  ಲೆಫ್ಟ್‌ ರೈಟ್‌ & ಸೆಂಟರ್‌ ಚರ್ಚೆ ಇಲ್ಲಿದೆ

ಎನ್‌ಐಎ ದಾಳಿ: ರಾಜ್ಯಾದ್ಯಂತ ಪಿಎಫ್‌ಐ ಕಾರ್ಯಕರ್ತರಿಂದ ರಸ್ತೆತಡೆ

Video Top Stories