ನರೇಂದ್ರ ಮೋದಿ ಬಂದ ಮೇಲೆ ಹಿಂದೂಗಳ ಸ್ವಾಭಿಮಾನ ಜಾಗೃತವಾಗಿದೆ: ಅವಿಮುಕ್ತೇಶ್ವರಾನಂದ ಮಹಾರಾಜ್

ಮೊನ್ನೆ ರಾಮಮಂದಿರ ಉದ್ಘಾಟನೆಗೆ ಜ್ಯೋತಿರ್ಮಠ ಕ್ಯಾತೆ!
ನಿನ್ನೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆ
PM ಮೋದಿ ಹೊಗಳಿ ಅವಿಮುಕ್ತೇಶ್ವರಾನಂದ ಯೂಟರ್ನ್

Share this Video
  • FB
  • Linkdin
  • Whatsapp

ರಾಮಮಂದಿರ ಉದ್ಘಾಟನೆ ಬಳಿಕ ಉತ್ತರಾಖಂಡದ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಮಹಾರಾಜ್(Avimukteshwaranand Ji Maharaj) ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿಯನ್ನು(Narendra Modi) ಹಾಡಿಹೊಗಳಿದ್ದಾರೆ. ನರೇಂದ್ರ ಮೋದಿ ಬಂದ ಮೇಲೆ ಹಿಂದೂಗಳ ಸ್ವಾಭಿಮಾನ ಜಾಗೃತ ಆಗಿದೆ. ಹಿಂದೂಗಳ ಸ್ವಾಭಿಮಾನ ಜಾಗೃತಿಯಾಗಿರುವುದು ಒಂದು ಸಣ್ಣ ಮಾತಲ್ಲ. ಸಾರ್ವಜನಿಕವಾಗಿ ನಾವೇನು ಮಾತಾಡಿದ್ದೇವೆ. ನಾವು ಮೋದಿ ವಿರೋಧಿ ಅಲ್ಲ. ನಾವು ಪ್ರಧಾನಿ ಮೋದಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತೇವೆ. ಇಷ್ಟು ಧೈರ್ಯ. ಹಿಂದೂಗಳ(Hindus) ಪರವಾಗಿ ನಿಲ್ಲುವ ವ್ಯಕ್ತಿ ಭಾರತದಲ್ಲಿ ಇಂತಹ ಪ್ರಧಾನಿ ಯಾರು ಮತ್ತೊಬ್ಬರು ಇದ್ರು ಹೇಳಿ ಎಂದಿದ್ದಾರೆ. ಒಳ್ಳೆಯ ಒಳ್ಳೆಯ ಪ್ರಧಾನಿ ಇದ್ರು, ಅವರದ್ದೇ ಆದ ವಿಶೇಷತೆಗಳು ಇದ್ವು. ಹಿಂದೂಗಳ ಭಾವನೆ.. ಸ್ವಾಭಿಮಾನ, ಸಮರ್ಥಕ.. ಆತ್ಮಬಲ ಹೆಚ್ಚಿಸುವ ಪ್ರಧಾನಿ ಇವರೇ ಮೊದಲಿಗರು ಎಂದು ಅವಿಮುಕ್ತೇಶ್ವರಾನಂದ ಮಹಾರಾಜ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ದುರ್ಬಲ ವಾದ ಮುಂದಿಟ್ಟು ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ಅಡ್ಡಿ ಮಾಡಬೇಡಿ: ತಮಿಳುನಾಡು ಸರ್ಕಾರಕ್ಕೆ 'ಸುಪ್ರೀಂ' ಸೂಚನೆ

Related Video