ಹೆಂಡತಿ ನೋಡಲು ಹೋದವನು ಸತ್ತುಹೋದ: ಗಂಡನನ್ನೇ ಕೊಂದು ಮಿಸ್ಸಿಂಗ್‌ ಕೇಸ್‌ ದಾಖಲಿಸಿದ ಪತ್ನಿ..!

3 ತಿಂಗಳ ಹಿಂದೆ ಅದು ಆ್ಯಕ್ಸಿಡೆಂಟ್.. ಈಗ ಕೊಲೆ..!
ಗಂಡನನ್ನ ಕೊಂದು ಮಿಸ್ಸಿಂಗ್ ಕೇಸ್ ದಾಖಲಿಸಿದ್ಲು..!
ಆ ಸಂಸಾರಕ್ಕೆ ಎಂಟ್ರಿ ಕೊಟ್ಟಿದ್ದ ಜೀಪ್ ಡ್ರೈವರ್..!
 

Share this Video
  • FB
  • Linkdin
  • Whatsapp


ಅದೊಂದು ಪುಟ್ಟ ಸಂಸಾರ, ಗಂಡ ಸ್ಕೂಲ್ ಬಸ್ ಡ್ರೈವರ್.. ಹೆಂಡ್ತಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗ್ತಿದ್ದಳು. ಈ ಪುಟ್ಟ ಸಂಸಾರದಲ್ಲಿ ಇಬ್ಬರು ಮಕ್ಕಳೂ ಇದ್ರು. ಆದ್ರೆ ಆವತ್ತೊಂದಿನ ದಿನ ಊರಿಗೆ ಹೋಗಿದ್ದ ಹೆಂಡತಿಯನ್ನ ನೋಡಲು ಹೊರಟಿದ್ದ ಗಂಡ ರಸ್ತೆ ಅಪಘಾತದಲ್ಲಿ(Accident) ಸಾವನ್ನಪ್ಪಿದ್ದ. ಹೆಂಡತಿಗೆ ಗಂಡನ ಸಾವಿನ ವಿಷ್ಯ ಗೊತ್ತಾಗದೇ ಆಕೆ ಮಿಸ್ಸಿಂಗ್ ಕಂಪ್ಲೆಂಟ್ (Missing case) ದಾಖಲಿಸಿದ್ಲು. ಇತ್ತ ಆ್ಯಕ್ಸಿಡೆಂಟ್ ಆದ ಗಂಡನ ಗುರುತು ಪತ್ತೆಯಾಗದ ಕಾರಣ ಪೊಲೀಸರು(police) ಮೃತದೇಹವನ್ನ ತಾವೇ ದಫಾನ್ ಮಾಡಿದ್ರು. ಇದೆಲ್ಲಾ ಆಗಿ ಇವತ್ತಿಗೆ 3 ತಿಂಗಳಾಗಿದೆ. ಇವತ್ತು ಆ ಆ್ಯಕ್ಸಿಡೆಂಟ್‌ನ ಹಿಂದಿನ ರಹಸ್ಯ ಬಯಲಾಗಿದೆ. ಆವತ್ತು ಆಗಿದ್ದು ಆ್ಯಕ್ಸಿಡೆಂಟ್ ಅಲ್ಲ ಬದಲಿಗೆ ಕೊಲೆ(Murder) ಅನ್ನೋದನ್ನ ಪೊಲೀಸರು 3 ತಿಂಗಳ ನಂತರ ಪತ್ತೆ ಮಾಡಿದ್ದಾರೆ.ಈ ವೇಳೆಗೆ ಸರ್ಜಾಪುರ ಪೊಲೀಸರಿಗೆ ಆ ಮಿಸ್ಸಿಂಗ್ ಕೇಸ್ ಬಗ್ಗೆ ಕ್ಲಿಯರ್ ಪಿಕ್ಚರ್ ಸಿಕ್ಕಿತ್ತು. ದೂರು ನೀಡಿದ್ದ ಹೆಂಡತಿ ಪಾರ್ವತಿಯೇ ಇಲ್ಲಿ ಏನೋ ಎಡವಟ್ಟು ಮಾಡಿದ್ದಾಳೆ. ಆಕೆ ಜೊತೆಗೆ ಯಲ್ಲಪ್ಪ ಕೂಡ ಸೇರಿಕೊಂಡು ಪವನ್ ಕುಮಾರ್‌ನನ್ನ ಏನೋ ಮಾಡಿದ್ದಾರೆ ಅಂತನಿಸಿತ್ತು. ಅದಕ್ಕೆ ಪುಷ್ಟಿ ನೀಡಿದ್ದು ಅವರಿಬ್ಬರ ಮೊಬೈಲ್ ಲೊಕೇಷನ್ ಮತ್ತು ಕಾಲ್ ಡಿಟೇಲ್ಸ್. ಹಾಗಾದ್ರೆ ಪಾರ್ವತಿ ಮತ್ತು ಯಲ್ಲಪ್ಪ ಇಬ್ಬರೂ ಸೇರಿಕೊಂಡೇ ಪವನ್ ಕುಮಾರ್ನನ್ನ ಮುಗಿಸಿದ್ರಾ..? ಹೆಂಡತಿಯೇ ಗಂಡನನ್ನ ಕೊಲ್ಲೋದಕ್ಕೆ ಸುಪಾರಿ ಕೊಟ್ಟುಬಿಟ್ಟಿದ್ಲಾ..? ಎಂಬ ಅನುಮಾನ ಕಾಡತೊಡಗಿದೆ.

ಇದನ್ನೂ ವೀಕ್ಷಿಸಿ: ಮಂತ್ರಿಸ್ಥಾನ ತಪ್ಪಿದ್ದೇ “ಹರಿ” ಕಥೆ "ಉರಿ"ಕಥೆಗೆ ಕಾರಣವಾಯ್ತಾ..?: ಕಿಚ್ಚಿಗೆ ತುಪ್ಪ ಸುರಿದ ಕೇಸರಿ ಕಲಿಗಳು..!

Related Video