ಅಯೋಧ್ಯೆಯಲ್ಲಿ ಸುವರ್ಣ ಹೆಜ್ಜೆ : ನಿರಂತರ ಸಂಚಾರ, ಸಮಗ್ರ ವರದಿ & ಲೇಟೆಸ್ಟ್ ಅಪ್ಡೇಟ್ಸ್‌ -ಒಂದು ಹಿನ್ನೋಟ

ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ತುಂಬಾ ಕಠಿಣವಾಗಿತ್ತು. ಅಯೋಧ್ಯೆಯಲ್ಲಿ ಅಡಿಪಾಯ ಹಾಕೋದ್ರಿಂದ ಹಿಡಿದು, ದೇಗುಲ ನಿರ್ಮಾಣದ ವರೆಗೂ ಅನೇಕ ಕಷ್ಟಗಳನ್ನ ಇಂಜಿಯರ್‌ಗಳು ಅನುಭವಿಸಿದ್ರು.

Share this Video
  • FB
  • Linkdin
  • Whatsapp

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ಮತ್ತೆ ವಿರಾಜಮಾನವಾಗ್ತಿದ್ದಾರೆ. ಬರೊಬ್ಬರಿ 500 ವರ್ಷಗಳ ಹೋರಾಟದ ಫಲವಾಗಿ ರಾಮಲಲ್ಲಾ ಮೂರ್ತಿ(Ramlalla statue) ಪ್ರತಿಷ್ಠಾಪನೆ ಆಗ್ತಿದೆ. ಆದ್ರೆ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಅಯೋಧ್ಯೆ(Ayodhya) ರಾಮಮಂದಿರ ನಿರ್ಮಾಣದ ಮೊದಲ ದಿನದಿಂದ ಹಿಡಿದು. ಕೊನೆಯ ದಿನದವರೆಗೂ ವೀಕ್ಷಕರಿಗೆ ಪ್ರತಿಯೊಂದು ಅಪ್‌ಡೇಟ್‌ ಕೊಡ್ತಾ ಬಂದಿದೆ. ರಾಮಮಂದಿರ(Ram Mandir) ನಿರ್ಮಾಣದ ವಿಚಾರದಲ್ಲಿ ಕೋರ್ಟ್‌ನಲ್ಲಿ ನಡೆದಿದ್ದು ಒಂದು ಹಂತದ ಹೋರಾಟವಾದರೆ, ಮಂದಿರ ನಿರ್ಮಾಣದ ವೇಳೆ ಎದುರಾದ ಸವಾಲು ಬೇರೆಯದೇ ರೀತಿಯದ್ದು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ರಾಜೇಶ್ ಕಾಲ್ರಾ ಅವರು ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರ ಜೊತೆ ಸಂದರ್ಶನ ಮಾಡಿದ್ದರು. ಈ ಸಂದರ್ಶನದಲ್ಲಿ ರಾಮ ಮಂದಿರ ಅಡಿಪಾಯದಿಂದ ಹಿಡಿದು ದೇಗುಲ ನಿರ್ಮಾಣದವರೆಗಿನ ಹಂತಗಳ ಬಗ್ಗೆ ವಿವರಿಸಲಾಗಿದೆ.

ಇದನ್ನೂ ವೀಕ್ಷಿಸಿ:  ಹಿಂದೂ ರಾಷ್ಟ್ರ ಮಾಡೋದು ಅಂದ್ರೆ ಏನು ? ಅಯೋಧ್ಯೆಯಲ್ಲಿ ದಲಿತರಿಗೆ ಪೂಜೆ ಸಲ್ಲಿಸೋಕೆ ಅವಕಾಶ ಇದೆಯಾ?

Related Video