ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ, ದೇಶದ್ರೋಹಿಗಳ ಹೋರಾಟ: ಅನಂತಕುಮಾರ್ ಹೆಗಡೆ
ಪಂಜಾಬ್ ಬಾರ್ಡರ್‌ನಲ್ಲಿ ರೈತರ ಹೆಸರಿನಲ್ಲಿ ಖಲಿಸ್ತಾನಿಗಳು ಗಲಾಟೆ ಮಾಡುತ್ತಿದ್ದಾರೆ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ(Farmer protest), ಅದು ದೇಶದ್ರೋಹಿಗಳ ಹೋರಾಟ ಎಂದು ಹೇಳುವ ಮೂಲಕ ರೈತ ಹೋರಾಟದ ಬಗ್ಗೆ ಅನಂತಕುಮಾರ್ ಹೆಗಡೆ(Ananthakumar Hegde) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಂಜಾಬ್ ಬಾರ್ಡರ್‌ನಲ್ಲಿ ರೈತರ ಹೆಸರಿನಲ್ಲಿ ಖಲಿಸ್ತಾನಿಗಳು ಗಲಾಟೆ ಮಾಡುತ್ತಿದ್ದಾರೆ. ದೇಶದ್ರೋಹಿಗಳು ಪ್ರತಿಭಟಿಸಲು(Protest) ವಿದೇಶದಿಂದ ಹಣ ಬರುತ್ತಿದೆ. ಇಡೀ ದೇಶದಲ್ಲಿ ಇಲ್ದಿರೋ ಗಲಾಟೆ, ಅನ್ಯಾಯ ಅವರಿಗೇನಾಗಿದೆ...?. ದೊಡ್ಡ ದೊಡ್ಡ ವಾಹನದಿಂದ ಬರ್ತಿದ್ದಾರೆ, ರೈತರಲ್ಲಿ ಅಷ್ಟೊಂದು ದುಡ್ಡು ಇದ್ಯಾ..? ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ ಪ್ರತೀ ವರ್ಷ ರೈತರ ಸಾಲ ದೊಡ್ಡದಾಗ್ತಾನೇ ಇದೆ. ದೊಡ್ಡ ಕೆರೆ ತೆಗೆದ್ರಿ ಸಣ್ಣ ಕೆರೆ ತುಂಬಿದ್ರಿ ಎಂದಿದ್ದಾರೆ.
ಇದನ್ನೂ ವೀಕ್ಷಿಸಿ: Darshan: ವೀರ ಸಿಂಧೂರ ಲಕ್ಷ್ಮಣ ಸಿನಿಮಾ ದರ್ಶನ್ ಮಾಡ್ತಾರಾ ? ಇದರ ಟೈಟಲ್ ಹಕ್ಕು ಯಾರ ಬಳಿ ಇದೆ ?