ಬಲೆಗೆ ಬಿದ್ದ.. ಖಲಿಸ್ತಾನಿ ಖಳನಾಯಕ.. ನಿಗೂಢ ಕಾರ್ಯಾಚರಣೆ ರಹಸ್ಯವೇನು?

ಹಲವು ದಿನಗಳ ಹುಡುಕಾಟದ ನಂತರ, ಪಂಜಾಬ್ ಪೊಲೀಸರು ಅಂತಿಮವಾಗಿ ಶಂಕಿತ ಅಮೃತಪಾಲ್ ಸಿಂಗ್‌ನನ್ನು ಬಂಧಿಸಿದ್ದಾರೆ. ಪಂಜಾಬ್ ಪೊಲೀಸರ ಹೇಳಿಕೆಯ ಪ್ರಕಾರ, ಅಮೃತಪಾಲ್ ಸಿಂಗ್ ಮೋಗಾ ಜಿಲ್ಲೆಯ ರೋಡ್ ಗ್ರಾಮದ ಗುರುದ್ವಾರದಲ್ಲಿ ಶರಣಾಗಿದ್ದಾನೆ. 

Share this Video
  • FB
  • Linkdin
  • Whatsapp

ಹಲವು ದಿನಗಳ ಹುಡುಕಾಟದ ನಂತರ, ಪಂಜಾಬ್ ಪೊಲೀಸರು ಅಂತಿಮವಾಗಿ ಶಂಕಿತ ಅಮೃತಪಾಲ್ ಸಿಂಗ್‌ನನ್ನು ಬಂಧಿಸಿದ್ದಾರೆ. ಪಂಜಾಬ್ ಪೊಲೀಸರ ಹೇಳಿಕೆಯ ಪ್ರಕಾರ, ಅಮೃತಪಾಲ್ ಸಿಂಗ್ ಮೋಗಾ ಜಿಲ್ಲೆಯ ರೋಡ್ ಗ್ರಾಮದ ಗುರುದ್ವಾರದಲ್ಲಿ ಶರಣಾಗಿದ್ದಾನೆ. ಪ್ರತ್ಯೇಕತಾವಾದಿ ಅಮೃತಪಾಲ್ ಬಂಧನದ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.ಇನ್ನು ಸಾಮಾನ್ಯ ಟ್ರಕ್ ಡ್ರೈವರ್‌ ಆಗಿದ್ದೋನು ವಾರಿಸ್ ಪಂಜಾಬ್ ದೇ ಅನ್ನೋ ಧಾರ್ಮಿಕ ಸಂಘಟನೆಗೆ ಇವನೇ ಈಗ ಲೀಡರ್ . ಇವನನ್ನು ಹಿಡಿಯಲು ಒಂದಲ್ಲಾ ಎರಡಲ್ಲಾ, ಬರೋಬ್ಬರಿ 36 ದಿನಗಳಿಂದಲೂ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕ್ಷಣಕ್ಕೊಂದು ವೇಷ, ಗಂಟೆಗೊಂದು ಸ್ಥಳ ಬದಲಾಯಿಸುತ್ತಿದ್ದ ಈ ಅಮೃತ್ ಪಾಲ್‌ನ ಜಾಡು ಕಂಡುಹಿಡಿಯುವುದು ಕಷ್ಟವಾಗಿತ್ತು. ಕಳೆದ ಮೂರ್ನಾಲ್ಕು ವಾರದಿಂದ, ಈ ವಾರಿಸ್ ಪಂಜಾಬ್ ದೇ ಸಂಘಟನೆಯ ನೂರಾರು ಸದಸ್ಯರನ್ನ ಬಂಧಿಸಲಾಗಿದ್ದು, ಯಾವಾಗ ಈ ಬಂಧನ ಭೀತಿ ತನ್ನ ತನಕ ಬಂದಿತೊ ಆ ಕೂಡಲೇ ಅಮೃತ್‌ಪಾಲ್‌ ಸಿಂಗ್‌ ತಲೆಮರೆಸಿಕೊಂಡಿದ್ದ.. ಆತನ ಪತ್ತೆಗಾಗಿ ಪೊಲೀಸರು ಪಂಜಾಬ್‌ ರಾಜ್ಯದ ಮೂಲೆ ಮೂಲೆಯನ್ನೂ ಹುಡುಕಿದ್ದರು. 

Add Asianetnews Kannada as a Preferred SourcegooglePreferred

Related Video