ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!

ಮದುವೆಯ ದಿನವೇ ಮದುಮಗನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಇಲ್ಲಿನ ಬದ್ನೇರಾ ರಸ್ತೆಯ ಸಾಹಿಲ್‌ ಮದುವೆ ಹಾಲ್‌ನಲ್ಲಿ 22 ವರ್ಷದ ಸುಜಲ್ ರಾಮ್ ಸಮುದ್ರ ಎಂಬುವವರ ಮದುವೆ ನಿಗದಿಯಾಗಿತ್ತು.

Share this Video
  • FB
  • Linkdin
  • Whatsapp

ಮಹಾರಾಷ್ಟ್ರ (ನ.13): ಮದುವೆಯ ದಿನವೇ ಮದುಮಗನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಇಲ್ಲಿನ ಬದ್ನೇರಾ ರಸ್ತೆಯ ಸಾಹಿಲ್‌ ಮದುವೆ ಹಾಲ್‌ನಲ್ಲಿ 22 ವರ್ಷದ ಸುಜಲ್ ರಾಮ್ ಸಮುದ್ರ ಎಂಬುವವರ ಮದುವೆ ನಿಗದಿಯಾಗಿತ್ತು. ಮದುವೆ ಸಮಾರಂಭದ ಚಿತ್ರೀಕರಣಕ್ಕಾಗಿ ಡ್ರೋನ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿತ್ತು. ರಾತ್ರಿ 9.30ರ ಸುಮಾರಿಗೆ ಮದುವೆ ಹಾಲ್‌ಗೆ ಬಂದ ದುಷ್ಕರ್ಮಿಗಳು ವೇದಿಕೆ ಏರಿ ಮದುಮಗನಿಗೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಆದರೆ ಮದುವೆಯನ್ನು ಶೂಟ್ ಮಾಡುವುದಕ್ಕೆ ಇದ್ದ ಡ್ರೋನ್ ಕ್ಯಾಮೆರಾ ಈ ದುಷ್ಕರ್ಮಿಗಳ ಚಲನವಲನವನ್ನು ಸೆರೆ ಹಿಡಿದಿದೆ. ಜೊತೆಗೆ ಡ್ರೋನ್ ಆಪರೇಟರ್‌ನ ಬುದ್ಧಿವಂತಿಕೆಯಿಂದಾಗಿ ಸುಮಾರು 2 ಕಿಲೋ ಮೀಟರ್ ದೂರದವರೆಗೆ ಅವರನ್ನು ಹಿಂಬಾಲಿಸಿಕೊಂಡು ಹೋಗಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Related Video