Ayodhya Ram Mandir: ಸಂಕಲ್ಪ ಸಿದ್ಧಿಗೆ ಕಾರಣವಾಗಿತ್ತು ಅದೊಂದು ಸಂಗತಿ..! ಆ ಇಬ್ಬರು ನಾಯಕರಿಂದ ಬದಲಾಗಿದ್ದೇನೇನು..?

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಗದ್ದುಗೆ ಹಿಡಿದಿದ್ದಾಗಲೇ, ಉತ್ತರ ಪ್ರದೇಶದಲ್ಲಿ ಅಪ್ರತಿಮ ಜಾದೂ ಒಂದು ನಡೆದಿತ್ತು. ಕಮಲಪಡೆ ಅಭೂತಪೂರ್ವ ವಿಜಯ ಸಾಧಿಸಿ ಗದ್ದುಗೆ ಹಿಡಿದಿತ್ತು.

First Published Jan 22, 2024, 1:04 PM IST | Last Updated Jan 22, 2024, 1:04 PM IST

ಸರಿ ಸುಮಾರು 40 ವರ್ಷಗಳ ಕಾಲ  ಹೈಕೋರ್ಟ್ ಅಂಗಳದಲ್ಲಿ ರಾಮಮಂದಿರ(Ram Mandir) ವಿವಾದದ ವಿಚಾರಣೆ ನಡೆದಿತ್ತು. ಕಡೆಗೆ 2010ರ ಸೆಪ್ಟಂಬರ್ 30ರಂದು ಅಂತ್ಯಗೊಂಡಿತ್ತು. ಹೈಕೋರ್ಟ್(Highcourt) ತನ್ನ ತೀರ್ಪನ್ನೂ ಪ್ರಕಟಿಸಿತ್ತು. ಆ ತೀರ್ಪಿನ ಪ್ರಕಾರ, 2.77 ಎಕರೆಯ ವಿವಾದಿತ ಸ್ಥಳವನ್ನ 3 ಭಾಗವಾಗಿ ವಿಂಗಡಿಸಲಾಯ್ತು. ವಿವಾದಿತ ಸ್ಥಳಾನ ಮೂರು ಭಾಗ ಮಾಡಿದ ನ್ಯಾಯಾಲಯ, ಮೊದಲನೇ ಭಾಗವನ್ನ ರಾಮ ಜನ್ಮಭೂಮಿ(Rama Janmabhoomi) ನ್ಯಾಸ್ ಪ್ರತಿನಿಧಿಸ್ತಾ ಇದ್ದ ರಾಮಲಲ್ಲಾನಿಗೆ, ಅಂದ್ರೆ ಶ್ರೀರಾಮನಿಗೆ ವಿಗ್ರಹವಿದ್ದ ಜಾಗವನ್ನ ಹಂಚಿದ್ರು. ಎರಡನೇದಾಗಿ, ಸೀತಾ ರಸೋಯಿ ಮತ್ತು ರಾಮ್ ಚಬುತ್ರಾ ಸ್ಥಳವನ್ನ ನಿರ್ಮೋಹಿ ಅಖಾಡಕ್ಕೆ ನೀಡಿದ್ರು. ಉಳಿದಿದ್ದೆಲ್ಲಾ ಸುನ್ನಿ ವಕ್ಫ್ ಬೋರ್ಡ್ಗೆ ಅಂತ ತೀರ್ಮಾನ ಕೊಟ್ಟಿತ್ತು ಹೈಕೋರ್ಟ್. ಈ ಮೂಲಕ, ವಿವಾದಿತ ಸ್ಥಳ ರಾಮ ಜನ್ಮಭೂಮಿ ಅಂತ ಕೋರ್ಟ್ ತೀರ್ಮಾನಿಸಿತ್ತು. ಎಎಸ್ಐ ಕೊಟ್ಟಿದ್ದ ವರದಿಯನ್ನೇ ತನ್ನ ತೀರ್ಪಿಗೆ ಆಧಾರ ಅಂತ ತಿಳಿಸಿತ್ತು. 2011ರ ಮೇ 9ರಂದು ಅಲಹಾಬಾದ್(Allahabad High Court) ತೀರ್ಪನ್ನ ಸುಪ್ರೀಂ ಕೋರ್ಟ್ ತಡೆಹಿಡಿಯುತ್ತೆ. ಆದ್ರೆ ಅಲ್ಲಿಂದ ಮುಂದೆ ಮತ್ತೆ ವಿಚಾರಣೆ ಶುರುವಾಗೋದು, 8 ವರ್ಷಗಳ ನಂತರ. ಅಂದ್ರೆ 2019ರ ಸೆಪ್ಟಂಬರ್ನಿಂದ ಸುಪ್ರೀಂ ಅಂಗಳದಲ್ಲಿ ವಿವಾದಿತ ಸ್ಥಳದ ವಿಚಾರಣೆ ಆರಂಭವಾಗುತ್ತೆ.

ಇದನ್ನೂ ವೀಕ್ಷಿಸಿ:  Ayodhya: ಕಳೆದುಕೊಂಡಿದ್ದನ್ನು ನ್ಯಾಯಯುತವಾಗಿ ಪಡೆದುಕೊಳ್ಳುವುದೇ ರಾಮನ ಆದರ್ಶ: ಹರೀಶ್‌ ಕಶ್ಯಪ್‌

Video Top Stories