
ಭ್ರಷ್ಟಾಚಾರ ಮುಚ್ಚಿ ಹಾಕಲು ಭಷ್ಟ್ರರೆಲ್ಲಾ ಒಂದಾಗಿದ್ದಾರೆ: ಪ್ರಧಾನಿ ಕುಹಕ
ಪ್ರಧಾನಿ ನರೇಂದ್ರ ಮೋದಿ ಇದೊಂದು ಭ್ರಷ್ಟಾಚಾರಿಗಳ ಸಭೆ ಎಂದು ಮಹಾಘಟಬಂಧನ್ ಬಗ್ಗೆ ಕುಹಕವಾಡಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳೆಲ್ಲಾ ಒಂದಾಗಿ ಮೋದಿ ನೇತೃತ್ವದ ಎನ್‌ಡಿಎ ಸೋಲಿಸಲು ಬೆಂಗಳೂರಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಇದೊಂದು ಭ್ರಷ್ಟಾಚಾರಿಗಳ ಸಭೆ ಎಂದು ಮಹಾಘಟಬಂಧನ್ ಬಗ್ಗೆ ಕುಹಕವಾಡಿದ್ದಾರೆ. ಈ ಮಧ್ಯೆ ಎನ್‌ಡಿಎ ಟೀಮ್ ಕೂಡ ಚುನಾವಣೆಗೆ ಸ್ಪರ್ಧಿಸಲು ಭರದ ಸಿದ್ಧತೆ ನಡೆಸಿದೆ. ಮಹಾಘಟಬಂಧನವನ್ನು ಟೀಕಿಸಿದ ಮೋದಿ ಇದೊಂದು ಭ್ರಷ್ಟರ ಟೀಮ್ ಯುಪಿಎ ಕಾಲದ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಭ್ರಷ್ಟರೆಲ್ಲರೂ ಒಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.