Panama Papers Leak: ಐಶ್‌ಗೆ ಇ.ಡಿ ಟೆನ್ಷನ್, ಸಂಸತ್‌ನಲ್ಲಿ ಬಿಜೆಪಿಗರಿಗೆ ಹಿಡಿಶಾಪ ಹಾಕಿದ ಅತ್ತೆ!

 2016ರಲ್ಲಿ ಬೆಳಕಿಗೆ ಬಂದಿದ್ದ ಪನಾಮಾ ಪೇಪ​ರ್ಸ್ (Panama Papers) ತೆರಿಗೆ ವಂಚನೆ ಹಗರಣ ಸಂಬಂಧ, ನಟಿ ಐಶ್ವರ್ಯಾ ರೈ (Aishwarya Rai)  ಜಾರಿ ನಿರ್ದೇಶನಾಲಯದ (ED) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

First Published Dec 22, 2021, 5:18 PM IST | Last Updated Dec 22, 2021, 5:18 PM IST

ಬೆಂಗಳೂರು (ಡಿ. 22): 2016ರಲ್ಲಿ ಬೆಳಕಿಗೆ ಬಂದಿದ್ದ ಪನಾಮಾ ಪೇಪ​ರ್ಸ್ (Panama Papers) ತೆರಿಗೆ ವಂಚನೆ ಹಗರಣ ಸಂಬಂಧ, ನಟಿ ಐಶ್ವರ್ಯಾ ರೈ (Aishwarya Rai)  ಜಾರಿ ನಿರ್ದೇಶನಾಲಯದ (ED) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಅಧಿಕಾರಿಗಳು, ತೆರಿಗೆ ವಂಚನೆಗೆ ನೆರವು ನೀಡುವ ದೇಶಗಳಲ್ಲಿ ಕಂಪನಿ ಆರಂಭಿಸಿದ ಬಗ್ಗೆ, ಅಲ್ಲಿನ ಹೂಡಿಕೆ, ವಿದೇಶಗಳಿಂದ ಬಂದ ಆದಾಯದ ಬಗ್ಗೆ ಪ್ರಶ್ನೆ ಮಾಡಿ, ಫೆಮಾ ಕಾಯ್ದೆಯಡಿ ನಟಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. 

ಬಿಜೆಪಿ ಸದಸ್ಯರು ವೈಯಕ್ತಿಕ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ತಾಳ್ಮೆ ಕಳೆದುಕೊಂಡ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ (Jaya Bacchan) ‘ಬಿಜೆಪಿಗರ ಕೆಟ್ಟದಿನಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ’ ಎಂದು ಹಿಡಿಶಾಪ ಹಾಕಿದರು. ಇದೇ ವೇಳೆ, ‘ಯಾರೊಬ್ಬರ ಮೇಲೂ ವೈಯಕ್ತಿಕ ಟೀಕೆ ಸಲ್ಲ. ಸಂಸತ್ತಿನಲ್ಲಿ ಏನು ನಡೆಯಿತೋ ಅದು ದುರದೃಷ್ಟಕರ. ಅವರು ಮಾತನಾಡಿದ ಬಗ್ಗೆ ಸಭಾಪತಿ ಸಹ ಪ್ರಶ್ನಿಸಲಿಲ್ಲ’ ಎಂದು ಬೇಸರ ಹೊರಹಾಕಿದರು.

ED Questions Aishwarya Rai: ಪನಾಮಾ ಕೇಸ್, 6 ಗಂಟೆ ಐಶ್ ವಿಚಾರಣೆ

ವಾಷಿಂಗ್ಟನ್‌ ಮೂಲದ ಜಾಗತಿಕ ತನಿಖಾ ಪತ್ರಕರ್ತರ ಒಕ್ಕೂಟವೂ, 2016ರಲ್ಲಿ ಪನಾಮಾ ದೇಶದ ಮೊಸ್ಸಾಕ್‌ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯ ದಾಖಲೆಗಳನ್ನು ಆಧರಿಸಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಅದರಲ್ಲಿ ಹೇಗೆ ರಾಜಕಾರಣಿಗಳು, ಉದ್ಯಮಿಗಳು, ನಟರು, ಕ್ರೀಡಾಪಟುಗಳು, ಖ್ಯಾತನಾಮರು, ತೆರಿಗೆ ವಂಚನೆಗೆ ನೆರವು ನೀಡುವ ದೇಶಗಳಲ್ಲಿ ಹಣ ಹೂಡಿಕೆ ಮಾಡಿ ತಮ್ಮ ದೇಶಗಳಲ್ಲಿ ತೆರಿಗೆ ವಂಚಿಸುತ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗ ಮಾಡಿತ್ತು.