ಅಯೋಧ್ಯೆ ತೀರ್ಪು: ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಚಿಂತನೆ

9 ವರ್ಷಗಳ ಕಾಲ ಸುಪ್ರೀಂ ಅಂಗಳದಲ್ಲಿದ್ದ ಅಯೋಧ್ಯೆ ಪ್ರಕರಣ ಇತ್ಯರ್ಥವಾಗಿದೆ. ಸರ್ವೋಚ್ಛ ನ್ಯಾಯಾಲಯದ ಪಂಚಪೀಠ ಶನಿವಾರ ಬೆಳಗ್ಗೆ ತೀರ್ಪನ್ನು ಪ್ರಕಟಿಸಿದೆ. ತೀರ್ಪಿನ ಬಗ್ಗೆ ಅಖಿಲ ಭಾರತೀಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಗೌರವವಿದೆ, ಆದರೆ ತೃಪ್ತಿ ತಂದಿಲ್ಲ, ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದಿದೆ.

Share this Video
  • FB
  • Linkdin
  • Whatsapp

ನವದೆಹಲಿ (ನ.09): 9 ವರ್ಷಗಳ ಕಾಲ ಸುಪ್ರೀಂ ಅಂಗಳದಲ್ಲಿದ್ದ ಅಯೋಧ್ಯೆ ಪ್ರಕರಣ ಇತ್ಯರ್ಥವಾಗಿದೆ. ಸರ್ವೋಚ್ಛ ನ್ಯಾಯಾಲಯದ ಪಂಚಪೀಠ ಶನಿವಾರ ಬೆಳಗ್ಗೆ ತೀರ್ಪನ್ನು ಪ್ರಕಟಿಸಿದೆ. 

ತೀರ್ಪಿನ ಪ್ರಕಾರ ವಿವಾದಿತ 2.77 ಎಕರೆ ಜಾಗ ರಾಮಜನ್ಮಭೂಮಿ ನ್ಯಾಸಕ್ಕೆ ಸೇರಿದ್ದು, ಸುನ್ನಿ ವಕ್ಫ್ ಬೋರ್ಡ್‌ಗೆ 5 ಎಕರೆ ಜಾಗವನ್ನು ನೀಡಬೇಕೆಂದು ಕೋರ್ಟ್ ಆದೇಶಿಸಿದೆ.

ತೀರ್ಪಿನ ಬಗ್ಗೆ ಅಖಿಲ ಭಾರತೀಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಗೌರವವಿದೆ, ಆದರೆ ತೃಪ್ತಿ ತಂದಿಲ್ಲ, ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದಿದೆ.

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video