ಜಗತ್ತಿನ ಯಾವುದೇ ಇಂಜೆಕ್ಷನ್ ಕೊಟ್ರೂ ಕಾಂಗ್ರೆಸ್ ಬದುಕಲ್ಲ: ಒವೈಸಿ ಟಾಂಗ್

ಪುಣೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ದುರ್ಬಲವಾಗಿದೆ. ಜಗತ್ತಿನ ಯಾವುದೇ ಕ್ಯಾಲ್ಶಿಯಂ ಇಂಜೆಕ್ಷನ್ ಕೊಟ್ರೂ ಪ್ರಯೋಜನ ಇಲ್ಲ. ಅದು ಅಧಪತನದತ್ತ ಸಾಗುತ್ತಿದೆ. ಅದನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ.  ಖುದ್ದು ಆ ಪಕ್ಷದವರೇ ಹೋರಾಡಲು ಸಿದ್ಧರಿಲ್ಲ, ಎಂದು ಕುಟುಕಿದರು.

First Published Oct 7, 2019, 8:14 PM IST | Last Updated Oct 7, 2019, 8:14 PM IST

ಪುಣೆ, ಮಹಾರಾಷ್ಟ್ರ (ಅ.07): ಪುಣೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ದುರ್ಬಲವಾಗಿದೆ. ಜಗತ್ತಿನ ಯಾವುದೇ ಕ್ಯಾಲ್ಶಿಯಂ ಇಂಜೆಕ್ಷನ್ ಕೊಟ್ರೂ ಪ್ರಯೋಜನ ಇಲ್ಲ. ಅದು ಅಧಪತನದತ್ತ ಸಾಗುತ್ತಿದೆ. ಅದನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ.  ಖುದ್ದು ಆ ಪಕ್ಷದವರೇ ಹೋರಾಡಲು ಸಿದ್ಧರಿಲ್ಲ, ಎಂದು ಕುಟುಕಿದರು.

ಮುಳುಗುತ್ತಿರುವ ಹಡಗಿನ ಕಪ್ತಾನ ಮೊದಲು ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಕಾಂಗ್ರೆಸ್ ನಾಯಕ ಚುನಾವಣೆ ಫಲಿತಾಂಶದ ಬಳಿಕ ಮುಳುಗುತ್ತಿರುವ ಹಡಗಿನಿಂದಿಳಿದು ಮೊದಲು ದಡ ಸೇರಿಕೊಂಡಿದ್ದಾರೆ, ಎಂದು ರಾಹುಲ್ ಗಾಂಧಿಗೆ ಲೇವಡಿ ಮಾಡಿದರು. ಈ ಹಿಂದೆಯೂ ಅವರು ಕಾಂಗ್ರೆಸ್‌ನ್ನು ಮುಳುಗುವ ಹಡಗಿಗೆ ಹೋಲಿಸಿದ್ದರು.