ಬಾಂಗ್ಲಾದಲ್ಲಿ 18 ಕೋಟಿ ಮುಸ್ಲಿಮರಿದ್ದೇವೆ, ಹಿಂದುತ್ವನ ಧ್ವಂಸ ಮಾಡ್ತೇವೆ ಹುಷಾರ್: ಛೋಟಾ ಲಾಡೆನ್ ಧಮ್ಕಿ

ಪಾಕಿಸ್ತಾನ ಆಯ್ತು.. ಚೀನಾ ಆಯ್ತು.. ಈಗ ಬಾಂಗ್ಲಾದೇಶದಿಂದಲೂ ಭಾರತಕ್ಕೆ ಥ್ರೆಟ್. ದಂಗೆಯ ಬೆಂಕಿಯಲ್ಲಿ ಬೆಂದ ಬಳಿಕ ಬಾಂಗ್ಲಾ ಕಂಪ್ಲೀಟ್ ಚೇಂಜ್ ಆಗಿದೆ. ಇದೀಗ ಅದೇ ಬಾಂಗ್ಲಾ ನೆಲದಲ್ಲಿ ಕೂತಿರುವ ಉಗ್ರ ಜಶಿಮುದ್ದೀನ್ ರಹಮಾನಿ ಅಲಿಯಾಸ್ ಛೋಟಾ ಲಾಡೆನ್ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. 

Share this Video
  • FB
  • Linkdin
  • Whatsapp

ಆತ ಜೈಲಿನಲ್ಲಿದ್ದ ಉಗ್ರಕ್ರಿಮಿ.. ಜೈಲಿಂದ ಹೊರಬಂದಿದ್ದೇ ಬಂದಿದ್ದು ಭಾರತದ ಮೇಲೆ ಆತನ ವಕ್ರದೃಷ್ಟಿ ಬಿದ್ದಿದೆ. ಭಾರತವನ್ನು ತುಕ್ಡೇ ತುಕ್ಡೇ ಮಾಡುವ ಮಾತನ್ನ ಆತನ ನಾಲಿಗೆ ಆಡಿದೆ. ಹಿಂದುತ್ವವನ್ನ ಧ್ವಂಸ ಮಾಡ್ತೀವಿ ಅಂತ ಆತ ಧಮ್ಕಿ ಹಾಕಿದ್ದಾನೆ. ಆತನ ಕಣ್ಣು ಕಾಶ್ಮೀರದ ಮೇಲೆ ಬಿದ್ದಿದೆ.. ಪಂಜಾಬ್‌ನಲ್ಲಿಯೂ ಕಿಚ್ಚು ಹಚ್ಚೋಕೆ ಕರೆ ಕೊಟ್ಟಿದ್ದಾನೆ. ಪಶ್ಚಿಮ ಬಂಗಾಳವನ್ನೇ ಭಾರತದಿಂದ ಬೇರೆ ಮಾಡುವ ಬಗ್ಗೆ ದೀದಿಗೆ ಆತ ದುಷ್ಟ ಸಲಹೆ ಕೊಟ್ಟಿದ್ದಾನೆ. ಅಷ್ಟಕ್ಕೂ ಭಾರತಕ್ಕೆ ಯಾರೀ ಹೊಸ ವೈರಿ..? ಛೋಟಾ ಲಾಡೆನ್ ಅಂತ ಕರೆಸಿಕೊಳ್ಳುವ ಆ ಉಗ್ರ ಭಾರತದ ಮೇಲೆ ಹೇಗೆಲ್ಲಾ ವಿಷ ಕಕ್ಕಿದ್ದಾನೆ..? ಭಾರತದ ಮಗ್ಗಲಲ್ಲಿ ಹುಟ್ಟಿಕೊಂಡಿರುವ ಮತ್ತೊಂದು ಹೊಸ ಮುಳ್ಳಿನ ಕಥೆಯೇ ಇವತ್ತಿನ ಸುವರ್ಣ ಸ್ಪೆಷಲ್ ಛೋಟಾ ಲಾಡೆನ್.. ಭಾರತಕ್ಕೆ ಹೊಸ ದುಷ್ಮನ್..

Related Video