ಚಿನ್ನ ಬಚ್ಚಿಟ್ಟುಕೊಂಡವರಿಗೆ ಶಾಕ್! ಕಪ್ಪು ಹಣ ಆಯ್ತು, ಬಂಗಾರದ ಬೇಟೆಗಿಳಿದ ಮೋದಿ ಸರ್ಕಾರ!

ಕಪ್ಪು ಹಣ ಹೊರತೆಗೆಯಲು ಸಮರ ಸಾರಿರುವ ಕೇಂದ್ರ ಸರ್ಕಾರ ನೋಟ್ ಬ್ಯಾನ್‌ನಂತಹ ಹಲವಾರು ದಿಟ್ಟ ಹೆಜ್ಜೆಗಳನ್ನಿಟ್ಟಿದೆ. ಈಗ ಚಿನ್ನ ಬಚ್ಚಿಟ್ಟುಕೊಂಡಿರುವವರ ಬೇಟೆಗಿಳಿದಿರುವ ಕೇಂದ್ರ ಹೊಸ ಯೋಜನೆಯನ್ನು ಸಿದ್ಧಪಡಿಸಿದೆ. ಇಲ್ಲಿದೆ ವಿವರ...  

First Published Oct 30, 2019, 6:37 PM IST | Last Updated Oct 30, 2019, 7:16 PM IST

ನವದೆಹಲಿ (ಅ.30): ಕಪ್ಪು ಹಣ ಹೊರತೆಗೆಯಲು ಸಮರ ಸಾರಿರುವ ಕೇಂದ್ರ ಸರ್ಕಾರ ನೋಟ್ ಬ್ಯಾನ್‌ನಂತಹ ಹಲವಾರು ದಿಟ್ಟ ಹೆಜ್ಜೆಗಳನ್ನಿಟ್ಟಿದೆ. ಈಗ ಚಿನ್ನ ಬಚ್ಚಿಟ್ಟುಕೊಂಡಿರುವವರ ಬೇಟೆಗಿಳಿದಿರುವ ಕೇಂದ್ರ ಹೊಸ ಯೋಜನೆಯನ್ನು ಸಿದ್ಧಪಡಿಸಿದೆ. 

ತೆರಿಗೆ ಕಟ್ಟದ, ರಸೀದಿಯಿಲ್ಲದ ಚಿನ್ನ ಪತ್ತೆ ಹಚ್ಚಲು ಕೇಂದ್ರ ಹೊಸ ಯೋಜನೆಯೊಂದನ್ನು ರೂಪಿಸುತ್ತಿದ್ದು, ಶೀಘ್ರದಲ್ಲಿ ಜಾರಿಗೊಳಿಸಲಿದೆ. 

ಕಪ್ಪುಹಣದ ವಿರುದ್ಧ ಸಮರ ಎಂದು ಕೇಂದ್ರ ಸರ್ಕಾರವು 2016 ನವಂಬರ್ 8ರಂದು ₹500 ಮತ್ತು ₹1000 ನೋಟುಗಳನ್ನು ನಿಷೇಧಿಸಿತ್ತು...