Search results - 153 Results
 • RTI

  News18, May 2019, 10:28 AM IST

  ಸ್ವಿಸ್ ಸಲ್ಲಿಸಿರುವ ಕಪ್ಪು ಹಣದ ಮಾಹಿತಿ ನೀಡಲು ಕೇಂದ್ರ ನಕಾರ!

  ಕಪ್ಪು ಹಣ: ಸ್ವಿಜರ್ಲೆಂಡಿಂದ ಬಂದ ಮಾಹಿತಿ ಬಹಿರಂಗಕ್ಕೆ ಕೇಂದ್ರ ಸರ್ಕಾರ ನಕಾರ

 • o.p.rawath

  NEWS4, Dec 2018, 8:22 AM IST

  ನೋಟು ರದ್ದತಿಯಿಂದ ಕಪ್ಪುಹಣ ಕಡಿಮೆ ಆಗ್ಲಿಲ್ಲ: ರಾವತ್‌

  ನೋಟು ರದ್ದತಿ ಒಂದು ಆಘಾತಕಾರಿ ನಿರ್ಧಾರ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್‌ ಹೇಳಿದ್ದರು. ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಕೂಡ ಇದನ್ನು ಟೀಕಿಸಿದ್ದರು. ಈಗ ನೋಟು ರದ್ದತಿಯಿಂದ ಏನೂ ಪ್ರಯೋಜನವಾಗಲಿಲ್ಲ ಎಂಬ ಹೇಳಿಕೆಯ ಸರದಿ ನಿರ್ಗಮಿತ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಅವರದು.

 • NEWS25, Nov 2018, 4:10 PM IST

  ಸಿಐಸಿ ಕೇಳಿದ್ರೂ ಕಪ್ಪುಹಣ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯ ಹಿಂದೇಟು!

  15 ದಿನಗಳಲ್ಲಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಅಕ್ಟೋಬರ್ 16 ರಂದು ಆದೇಶ ನೀಡಿದ್ದರೂ, ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದೆ.

 • INDIA10, Nov 2018, 11:06 AM IST

  ನೋಟು ರದ್ದತಿ ಬಗ್ಗೆ ಆರ್‌ಬಿಐ ನೀಡಿತ್ತು ಈ ಎಚ್ಚರಿಕೆ

  ಕಳೆದ 2 ವರ್ಷಗಳ ಹಿಂದೆ ನೋಟು ಅಮಾನ್ಯ ಮಾಡುವಾಗ ಆರ್ ಬಿಐ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಇದರಿಂದ ಕಾಳಧನ ನಿವಾರಣೆ ಆಗುವುದಿಲ್ಲ ಎಂದು ತಿಳಿಸಿತ್ತು ಎನ್ನಲಾಗಿದೆ.

 • Pakistan Currency

  NEWS29, Oct 2018, 11:45 AM IST

  ಪಾಕ್ ಬಡವರೀಗ ನೂರಾರು ಕೋಟಿ ಒಡೆಯರು!

  ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದಾರೆ. ಕಪ್ಪು ಕುಳಗಳು ತಮ್ಮಲ್ಲಿರುವ ನೂರಾರು ಕೋಟಿ ರು. ಹಣವನ್ನು ಅಮಾಯಕ ಬಡವರ ಬ್ಯಾಂಕ್ ಖಾತೆಗೆ ವರ್ಗಾಯಿಸಿ, ವಿದೇಶಕ್ಕೆ ಸಾಗಿಸುತ್ತಿದ್ದಾರೆ. ಏಕಾಏಕಿ ತಮ್ಮ ಖಾತೆಗೆ ನೂರಾರು ಕೋಟಿ ರು. ಹಣ ಬಂದು ಹೋಗಿರುವುದನ್ನು ಕಂಡು ಬಡವರು ಚಿಂತಾಕ್ರಾಂತರಾಗಿದ್ದರೆ, ಈ ವ್ಯವಹಾರದ ಬಗ್ಗೆ ಅಧಿಕಾರಿಗಳು ಬಡವರ ಮನೆ ಬಾಗಿಲು ಬಡಿಯುತ್ತಿದ್ದಾರೆ. 

 • NEWS2, Oct 2018, 4:24 PM IST

  ಮಾಹಿತಿ ಬಹಿರಂಗ, ಅತಿ ಹೆಚ್ಚಿನ ಕಪ್ಪುಹಣ ಇದ್ದಿದ್ದು ಇವರ ಬಳಿಯೆ!

  ಕಾಳಧನವನ್ನು ಹೊರತೆಗೆಯಲು ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ ನಂತರದ ಬೆಳವಣಿಗೆಗಳು ನಮ್ಮೆಲ್ಲರಿಗೆ ಗೊತ್ತೆ ಇದೆ. ಕಾಳಧನ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಹಾಗಾದರೆ ಯಾವ ರಾಜ್ಯದ ಜನರ ಬಳಿ ಕಪ್ಪು ಹಣ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೇಖರೆಣೆಯಾಗಿತ್ತು? ಅದಕ್ಕೊಂದು ಉತ್ತರ ಎಂಬಂತಹ ವರದಿ ಇಲ್ಲಿದೆ.

 • Venkaiah Naidu

  BUSINESS31, Aug 2018, 11:33 AM IST

  ಬಾತ್ ರೂಂ, ಬೆಡ್ ರೂಂ 'ರಹಸ್ಯ' ಹೊರ ಬಿತ್ತು: ವೆಂಕಯ್ಯ ನಾಯ್ಡು!

  ನೋಟು ಅಮಾನ್ಯೀಕರಣದಿಂದ ಸರ್ಕಾರ ಸಾಧಿಸಿದ್ದಾದರೂ ಏನು ಎಂಬುದಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮರ್ಪಕ ಉತ್ತರ ನೀಡಿದ್ದಾರೆ. ನೋಟು ಅಮಾನ್ಯೀಕರಣದಿಂದಾಗಿ ಬಾತ್ ರೂಂ, ಬೆಡ್ ರೂಂ ನಲ್ಲಿ ಅಡಗಿಸಿಟ್ಟಿದ್ದ ಕಪ್ಪುಹಣವೆಲ್ಲಾ ಇದೀಗ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ ಎಂದು ನಾಯ್ಡು ಸಮರ್ಥಿಸಿಕೊಂಡಿದ್ದಾರೆ.

 • BUSINESS31, Aug 2018, 10:54 AM IST

  ಹೊರಬಿತ್ತು ಜೇಟ್ಲಿ ಮನದಾಳದ ಮಾತು: ನೋಟ್ ಬ್ಯಾನ್, ಇದು ಸಿಕ್ರೇಟ್ ಪ್ಲ್ಯಾನ್!

  ನೋಟು ನಿಷೇಧದಿಂದ ಸರ್ಕಾರ ಸಾಧಿಸಿದ ಸಾಧನೆಯಾದರೂ ಏನು ಎಂಬ ಟೀಕಿಗೆ ಉತ್ತರಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ನೋಟು ಅಮಾನ್ಯೀಕರಣದಿಂದಾಗಿ ದೇಶದ ಆರ್ಥಿಕತೆ ಸುಗಮವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದಾರೆ.

 • Modi

  BUSINESS30, Aug 2018, 1:31 PM IST

  ನೋಟ್ ಬ್ಯಾನ್: ಉತ್ತರಿಸಬೇಕಾಗಿರುವುದೂ ಒನ್ ಮ್ಯಾನ್!

  ಕಪ್ಪುಹಣದ ಮೇಲೆ ಪ್ರಹಾರ, ಭಯೋತ್ಪಾದನೆ ಮೇಲೆ ಹಿಡಿತ, ನಕಲಿ ನೋಟುಗಳ ಹಾವಳಿ ತಡೆಗಟ್ಟುವಿಕೆ, ಆರ್ಥಿಕತೆ ಬಲವರ್ಧನೆ, ಇವು ನವೆಂಬರ್ ೮, ೨೦೧೬ ರಂದು ನಾಣ್ಯ ಅಮಾನ್ಯೀಕರಣದ ಘೋಷಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ್ದ ಮಾತುಗಳು. ಆದರೆ ಬರೋಬ್ಬರಿ 2 ವರ್ಷಗಳ ಬಳಿಕ ಆರ್‌ಬಿಐ ನಾಣ್ಯ ಅಮಾನ್ಯೀಕರಣದ ಕುರಿತು ಪ್ರಕಟಿಸಿರುವ ವರದಿ, ಸರ್ಕಾರ ಈ ಮೇಲಿನ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆ ಕೇಳುವಂತೆ ಮಾಡಿದೆ. ಆರ್‌ಬಿಐ ನೂತನ ವರದಿ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. 

 • BUSINESS29, Aug 2018, 1:58 PM IST

  ನೀವ್ ಕೊಟ್ರಲ್ಲಾ ಹಳೇ ನೋಟು, ಕ್ರಾಸ್ ಆಗಿದೆ ಆರ್‌ಬಿಐ ಗೇಟು!

  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2017-18 ರ ವಾರ್ಷಿಕ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ನಾಣ್ಯ ಅಮಾನ್ಯೀಕರಣದ ಕುರಿತು ಉಲ್ಲೇಖ ಮಾಡಿರುವ ಆರ್‌ಬಿಐ, ರದ್ದಾದ 500, 1000 ರೂ. ನೋಟುಗಳ ಪೈಕಿ ಶೇ.99.3 ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದೆ. 

 • NEWS30, Jun 2018, 2:10 PM IST

  ಸ್ವಿಸ್‌ ಬ್ಯಾಂಕ್ ಹಣದ ಬಗ್ಗೆ ಕೇಂದ್ರ ಸಚಿವರ ಅಚ್ಚರಿ ಹೇಳಿಕೆ

  ರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾಳಧನದ ವಿರುದ್ಧ ಸಮರ ಸಾರಿದ್ದರೂ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣ 2017ರಲ್ಲಿ ಸುಮಾರು ಶೇ.50ರಷ್ಟುಏರಿಕೆಯಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯೆಲ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

 • NEWS30, Jun 2018, 1:13 PM IST

  ರೈತರ ಸಾಲ ಮನ್ನಾಗೆ ಸ್ವಿಸ್ ಬ್ಯಾಂಕ್ ಹಣ

  ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲು ಎಷ್ಟು ಹಣವಿದ್ದರೂ ಸಾಲುತ್ತಿಲ್ಲ. ಹೀಗಾಗಿ ಸ್ವಿಸ್‌ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಹಣವನ್ನು ತಮಗೆ ಕೊಡಿ ಎಂದು ಕೇಂದ್ರದ ನಾಯಕರಲ್ಲಿ ಸಿಎಂ ಕುಮಾರಸ್ವಾಮಿ ಕೋರಿಕೆ ಸಲ್ಲಿಸಿದ್ದಾರೆ.

 • NEWS30, Jun 2018, 12:06 PM IST

  ಪ್ರಧಾನಿ ಮೋದಿಗೆ ರಾಹುಲ್ ಕಪ್ಪು ಹಣ ಟಾಂಗ್

  ಕಪ್ಪುಕುಳಗಳ ಸ್ವರ್ಗ ಎಂದೇ ಬಿಂಬಿತವಾಗಿರುವ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಹಣದ ಪ್ರಮಾಣ 2017ನೇ ಸಾಲಿನಲ್ಲಿ ಶೇ.50ರಷ್ಟುಹೆಚ್ಚಾಗಿ 7000 ಕೋಟಿ ರು.ಗೆ ತಲುಪಿದೆ ಎಂಬ ವರದಿಯನ್ನಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚಾಟಿ ಬೀಸಿದ್ದಾರೆ.

 • BUSINESS29, Jun 2018, 7:18 PM IST

  ಸ್ವಿಸ್ ಬ್ಯಾಂಕ್ ಭಾರತೀಯರ ಹಣದ ವಿರುದ್ಧ ಕ್ರಮದ ಭರವಸೆ!

  ನಿನ್ನೆ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್ ಬಿ) ಬಿಡುಗಡೆ ಮಾಡಿರುವ ವಾರ್ಷಿಕ ವರದಿಯ ಪ್ರಕಾರ, 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ವಿಶ್ವದ ಒಟ್ಟು ವಿದೇಶಿ ಗ್ರಾಹಕರ ಹಣದಲ್ಲಿ ಶೇ.3ರಷ್ಟು(100 ಲಕ್ಷ ಕೋಟಿ ರುಪಾಯಿ) ಹೆಚ್ಚಳವಾಗಿದೆ. ಈ ಪೈಕಿ ಭಾರತೀಯರ ಹಣ ಶೇ.50ರಷ್ಟು(7 ಸಾವಿರ ಕೋಟಿ) ಹೆಚ್ಚವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಸು ಸಚಿವ ಪಿಯೂಷ್ ಗೋಯಲ್, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
   

 • NEWS29, Jun 2018, 5:12 PM IST

  ಈ ವಿಚಾರದಲ್ಲಿ ಪಾಕ್ ಮೀರಿಸುವುದು ಭಾರತಕ್ಕೆ ಬಹಳ ಕಷ್ಟ!

  • ಭಾರತಕ್ಕಿಂತ ಪಾಕಿಸ್ತಾನದಲ್ಲೇ ಹೆಚ್ಚು ಕಾಳಧನಿಕರು
  • ಕಪ್ಪು ಹಣದಲ್ಲೇ ಭಾರತವನ್ನೇ ಮೀರಿಸಿದ ಪಾಕಿಸ್ತಾನ
  • ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಪಾಕಿಸ್ತಾನಿಯರ ಕಾಂಚಾಣ