ಸಂಸದ ಪ್ರತಾಪ್ ಸಿಂಹ ಎಡವಿದ್ದೆಲ್ಲಿ..? ಟಾರ್ಗೆಟ್ ಆಗಿದ್ದೇಕೆ..?
ಬಿಜೆಪಿಯ ಫೈರ್ ಬ್ರ್ಯಾಂಡ್ ಮೇಲೆ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್..!
ಸಂಸತ್ ಭವನದ ಭದ್ರತಾ ಲೋಪಕ್ಕೆ ಪ್ರತಾಪ್ ಸಿಂಹ ಟಾರ್ಗೆಟ್..!
ಅಪರಿಚಿತರಿಗೆ ಸಂಸತ್ ಪಾಸ್ ಕೊಟ್ಟು ಕೆಟ್ಟರಾ ಬಿಜೆಪಿ ಸಂಸದ..?
ಆ ಐದು ನಿಮಿಷ ಲೋಕಸಭೆ(Loksabhe) ನಿಜಕ್ಕೂ ಥಂಡಾ ಹೊಡೆದು ಹೋಗಿತ್ತು. ಬುಧವಾರ ಲೋಕಸಭೆಯ ಒಳಗೆ ನಡೆದ ಘಟನೆ, ಆ ಘಟನೆಯ ಹಿಂದಿನ ಪಿತೂರಿ, ಆ ಪಿತೂರಿಯಲ್ಲಿ ಭಾಗಿಯಾದವರು, ಅವರ ಉದ್ದೇಶ. ಹೀಗೆ ಎಲ್ಲವೂ ನಿಗೂಢ. ಮೈಸೂರಿನ(Mysore)ಮನೋರಂಜನ್, ಲಕ್ನೋದ ಸಾಗರ್ ಶರ್ಮಾ, ಹರ್ಯಾಣದ ನೀಲಮ್ ಕೌರ್ ಮತ್ತು ಮಹಾರಾಷ್ಟ್ರದ ಅನ್ಮೋಲ್ ಶಿಂಧೆ. ಈ ನಾಲ್ಕು ಮಂದಿ ಹೆಣೆದ ಸಂಚು ಸಂಸತ್‌ನ(parliment) ಭದ್ರತಾ ವ್ಯವಸ್ಥೆಯ ಬಗ್ಗೆ ನಾನಾ ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. ಇವೆಲ್ಲದರ ಜೊತೆಗೆ ಪ್ರಕರಣದಲ್ಲಿ ದೊಡ್ಡದಾಗಿ ಸದ್ದು ಮಾಡ್ತಿರೋದು, ಸೆಂಟರ್ ಆಫ್ ಟಾರ್ಗೆಟ್ ಆಗ್ತಿರೋದು ಅದೊಂದು ಹೆಸರು. ಅವರೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ(Pratap Simha). ಸಂಸತ್ ಭವನಕ್ಕೆ ಇಬ್ಬರು ನುಗ್ಗಿ ಆತಂಕ ಸೃಷ್ಠಿಸಿದ ಬೆನ್ನಲ್ಲೇ, ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಾಪ್ ಸಿಂಹ ಅವರ ಬಗ್ಗೆ ಚರ್ಚೆಯಾಗ್ತಿದೆ. ಕಾರಣ ಆ ಆಗಂತುಕರಿಗೆ, ಅಪರಿಚಿತರಿಗೆ ಲೋಕಸಭೆಗೆ ಎಂಟ್ರಿಯಾಗಲು ವಿಸಿಟರ್ ಪಾಸ್ ಕೊಟ್ಟವರೇ ಬಿಜೆಪಿ(BJP) ಸಂಸದ ಪ್ರತಾಪ್ ಸಿಂಹ. ಆ ಪಾಸ್ ಸಿಗದೇ ಇದ್ದಿದ್ದರೆ, ಪ್ರತಾಪ್ ಸಿಂಹ ಕಚೇರಿಯಿಂದ ಆ ಪಾಸ್‌ಗಳನ್ನು ಕೊಡದೇ ಇದ್ದಿದ್ದರೆ ಲೋಕಸಭೆಯೊಳಗೆ ಅಂಥಾ ಒಂದು ಅನಾಹುತ ನಡೀತಾನೇ ಇರ್ಲಿಲ್ಲ. ಇದನ್ನು ನಾವ್ ಹೇಳ್ತಿಲ್ಲ, ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಹೇಳ್ತಾ ಇದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಸಂದರ್ಭಗಳಲ್ಲಿ ಬೇರೆಯವರ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವ ಪ್ರತಾಪ್ ಸಿಂಹ, ಈಗ ಯಾಕೆ ಮೌನವಾಗಿದ್ದಾರೆ ಅಂತ ಕೈ ನಾಯಕರು ಪ್ರಶ್ನಿಸ್ತಾ ಇದ್ದಾರೆ.
ಇದನ್ನೂ ವೀಕ್ಷಿಸಿ: ಸಂಸತ್ ಸಂಚಿನ ರಹಸ್ಯವೇನು ಗೊತ್ತಾ..? ಯಾರು ಈ ಆಗಂತುಕರು? ಏನಿವರ ಅಸಲಿ ಕತೆ!